ದಿದಿಹಟ್ ಒಂದು ಶಾಂತವಾದ ಪ್ರವಾಸಿ ತಾಣವಾಗಿದ್ದು ನಗರ ಪಂಚಾಯತ್ ಕೂಡ ಆಗಿದೆ. ಇದು ಪಿಥೋರಗಡ್ ನಿಂದ 54 ಕಿ.ಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ 1725 ಮೀ ಎತ್ತರದಲ್ಲಿದೆ. ಇದರ ತುದಿಯನ್ನು ದಿಗ್ತರ್ ಎಂದು ಕರೆಯಲಾಗುತ್ತದೆ. ಈ ಸ್ಥಳದ ಹೆಸರು ಕುಮಾವೂನಿ ಪದ ದಂಡ್ ನಿಂದ ಬಂದಿದೆ ಇದರ ಅರ್ಥ ಸಣ್ಣ ದಿಣ್ಣೆ ಎಂಬುದಾಗಿದೆ. ಭಡಿಗಡ್ ಎಂದು ಕರೆಯಲ್ಪಡುವ ಚರಮಗಡ್ ನದಿ ಇಲ್ಲೇ ಹರಿಯುತ್ತದೆ. ಸುಂದರವಾದ ಮತ್ತು ಪ್ರಖ್ಯಾತವಾದ ಹಾತ್ ಕಣಿವೆ ಇಲ್ಲೇ ಸಮೀಪದಲ್ಲಿದೆ. ಇಲ್ಲಿ ಶಿವ ದೇವರ ಸಿರಾಕೋಟ್ ಎಂಬ ದೇವಸ್ಥಾನವೂ ಇದೆ. ನಾನ್ಪುಪು ಹಳ್ಳಿಯಲ್ಲಿರುವ ಈ ದೇವಸ್ಥಾನಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರ ದಂಡು ಆಗಮಿಸುತ್ತದೆ.


Click it and Unblock the Notifications