ತ್ರಿಶಂಕು ಪರ್ವತವು ಪೀರ್ಮೆಡೆಯಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ಈ ಪರ್ವತದಲ್ಲಿ ನಿಂತು ನೋಟ ಹರಿಸಿದರೆ ನೀವು ಮಂತ್ರಮುಗ್ಧರಾಗುತ್ತೀರಿ. ರಜೆಯ ಸಮಯ ಕಳೆಯೋದಿಕ್ಕೆ ಇದೊಂದು ಸೂಕ್ತ ತಾಣ. ಪರ್ವತದ ಕಷ್ಟಕರವಾದ ದಾರಿಯಲ್ಲಿ ಸಂಜೆಯ ಹೊತ್ತಲ್ಲಿ ನಡೆಯುತ್ತಾ ಹೋಗುವಾಗ ಈ ತಾಣದ ಪ್ರಶಾಂತತೆಯನ್ನು ಅನುಭವಿಸಬಹುದು. ಗುಡ್ಡಗಳನ್ನು ರಮಣೀಯವಾಗಿ ಮುತ್ತಿಕ್ಕುವ ಕಾಮನಬಿಲ್ಲು ಪ್ರವಾಸಿಗರ ಕಣ್ಮನ ತಣಿಸುತ್ತದೆ. ತ್ರಿಶಂಕು ಪರ್ವತವು ಸುಮ್ಮನೆ ನಡೆದಾಡುವುದಕ್ಕೆ ಚಾರಣಕ್ಕೆ ಹೇಳಿಮಾಡಿಸಿದ ಜಾಗ. ಕೌಟುಂಬಿಕ ಪ್ರವಾಸ, ಬೈಕ್ ಟ್ರಿಪ್, ಚಾರಣ, ಒಂದು ದಿನದ ಪ್ರವಾಸ ಮತ್ತು ಹನಿಮೂನ್ಗೆ ಸೂಕ್ತವಾದ ತಾಣವಿದು. ಫೊಟೋಗ್ರಫಿಯ ಹುಚ್ಚಿದ್ದವರಿಗೆ ಇಲ್ಲಿ ಚಿನ್ನದ ನಿಧಿಯೇ ಇದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.


Click it and Unblock the Notifications