ಶೇರ್ ಶಾಹಿ ಎಂದು ಕರೆಯಲ್ಪಡುವ ಶೇರ್ ಶಾ ಸೂರಿ ಮಸ್ಜಿದಿಯು ಅಫ್ಘಾನ್ ಶೈಲಿಯ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಇದನ್ನು ಶೇರ್ ಶಾ ಸೂರಿ 1540-1545ರಲ್ಲಿ ತನ್ನ ಪ್ರಾಬಲ್ಯ ತೋರಿಸಲು ನಿರ್ಮಿಸಿದರು.
ಮಸೀದಿಯ ಸಂಕೀರ್ಣದ ಒಳಗಡೆಯಿರುವ ಸಮಾಧಿಯನ್ನು ಒಂದು ಅಷ್ಟಭುಜಾಕೃತಿಯ ಕಲ್ಲು ಚಪ್ಪಡಿಯು ರಕ್ಷಿಸುತ್ತದೆ. ಮಧ್ಯಭಾಗದಲ್ಲಿರುವ ಗುಮ್ಮಟವನ್ನು ಸುತ್ತುವರಿದಿರುವ ನಾಲ್ಕು ಸಣ್ಣ ಗುಮ್ಮಟಗಳು ಶೇರ್ ಶಾ ಮಸೀದಿಯ ಪ್ರಮುಖ ಆಕರ್ಷಣೆ. ಯಾವುದೇ ಭಾಗ ಅಥವಾ ದಿಕ್ಕಿನಿಂದ ನಿಂತು ನೋಡಿದರೂ ಕೇವಲ ಮೂರು ಗೊಮ್ಮಟಗಳು ಕಂಡುಬರುವುದು ಒಂದು ಅಚ್ಚರಿಯೇ ಸರಿ.
ಪಟ್ನಾದ ಘಾಯಿಘಾಡ್ ಮೊಹಲ್ಲಾದಲ್ಲಿರುವ ಐತಿಹಾಸಿಕ ಸಿಕ್ ಕೇಂದ್ರ. ಇದು ತಖ್ತ್ ಶ್ರೀ ಹರ್ ಮಂದಿರ ಸಾಹಿಬ್ ನಿಂದ 4 ಕಿ.ಮೀ. ದೂರದಲ್ಲಿದೆ. ಗುರುದ್ವಾರ ಪಾಹಿಲಾ ಬಾರ ಈ ಪ್ರದೇಶದಲ್ಲಿರುವ ಅತ್ಯಂತ ಹಳೆಯ ಗುರುದ್ವಾರ. ವಿಶಾಲವಾದ ಹಾಲ್ ನ್ನು ಒಳಗೊಂಡಿರುವ ಹೊಸ ಕಟ್ಟಡವನ್ನು 1980ರಲ್ಲಿ ಕಟ್ಟಲಾಗಿತ್ತು.


Click it and Unblock the Notifications