ಫುಲ್ವರಿ ಶರೀಫ್ ನ್ನು ಸೂಫಿಸಂನ ಪ್ರಾಚೀನ ಕೇಂದ್ರವೆಂದು ಕರೆಯಲಾಗುತ್ತದೆ ಮತ್ತು ಹಲವಾರು ಪ್ರಸಿದ್ಧ ಸೂಫಿ ಸಂತರು ಇಲ್ಲಿ ಸೇರುತ್ತಿದ್ದರು. ಪ್ರಾಚೀನ ಕಾಲದಲ್ಲಿ ಸೂಫಿ ಸಂತರು ಬಿಹಾರವನ್ನು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸುಧಾರಣೆಯ ಮುಖ್ಯಕೇಂದ್ರವನ್ನಾಗಿ ಮಾಡಿದ್ದರು. ಪ್ರೀತಿ ಮತ್ತು ಸಹಿಷ್ಣುತೆಯ ಸಂದೇಶವನ್ನು ಸಾರಿದ ಸೂಫಿ ಸಂತರಿಗೆ ಫುಲ್ವರಿ ಪ್ರಮುಖ ತಾಣ. ಇಲ್ಲಿರುವ ಪ್ರಸಿದ್ಧ ಸನ್ಗಿ ಮಸೀದಿ ಪ್ರಾಚೀನ ಶ್ರೀಮಂತ ವಾಸ್ತುಶಿಲ್ಪಕ್ಕೆ ಹೆಸರುವಾಸಿ ಮತ್ತು ಕೆಂಪು ಬಣ್ಣದಲ್ಲಿ ಇದನ್ನು ಕಟ್ಟಲಾಗಿದೆ. ಮಸೀದಿ ಬದಿಯಲ್ಲಿ ಲಾಲ್ ಶಾ ಬಾಬಾರ ಗುಡಿಯಿದೆ.


Click it and Unblock the Notifications