ಸಂಜಯ್ ಗಾಂಧಿ ಜೈವಿಕ ಉದ್ಯಾನವು ಒಂದು ಪ್ರಶಾಂತ ತಾಣ. ಮಧ್ಯದಲ್ಲಿ ಒಂದು ಕೊಳ ಮತ್ತು ಹಲವಾರು ಅರಣ್ಯ ಕಾಲುದಾರಿಯನ್ನು ಒಳಗೊಂಡಿರುವ ಈ ಪ್ರದೇಶವು ಸಂಪೂರ್ಣವಾಗಿ ಸಸ್ಯರಾಶಿಗಳಿಂದ ಕೂಡಿದ್ದು, ವಿಶೇಷವಾಗಿ ಇದು ಮಕ್ಕಳಿಗೆ ತುಂಬಾ ಆಸಕ್ತಿದಾಯಕ ಸ್ಥಳವನ್ನಾಗಿಸಿದೆ. ಈ ಪಾರ್ಕ್ ನಲ್ಲಿ 300 ಜಾತಿಯ ಸಸ್ಯಗಳು, ಔಷಧೀಯ ಸಸ್ಯಗಳು ಮತ್ತು ಪೊದರು ಸಸ್ಯಗಳಿವೆ. ಗಿಡಮೂಲಿಕೆ ಸಸ್ಯಗಳ ನರ್ಸರಿ, ಆರ್ಕಿಡ್ ಹೌಸ್, ಜರೀಗಿಡ ಮನೆ, ಗಾಜು ಮನೆ ಮತ್ತು ಗುಲಾಬಿ ಉದ್ಯಾನ ಸಹಿತ ವಿವಿಧ ಸಸ್ಯಗಳ ಪ್ರದರ್ಶನವನ್ನು ಕಾಣಬಹುದು.


Click it and Unblock the Notifications