ಮುಲ್ಲೂರ ಸಮರಕಂ, ಮುಲ್ಲೂರ ಎಸ್. ಪದ್ಮನಾಭ ಪನಿಕ್ಕರ್ (1869 - 1931) ಅವರಿಗೆ ಅರ್ಪಿಸಲಾಗಿದೆ. ಇವರು ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಕೇರಳದ ಹೆಸರಾಂತ ಕವಿ ಹಾಗೂ ಸಮಾಜ ಸುಧಾರಕ. ಇಲವುಂತಿಟ್ಟ ಎಂಬಲ್ಲಿ ಇರುವ ಮುಲ್ಲೂರ ಸಮರಕಂ, ಮುಲ್ಲೂರ ಎಸ್. ಪದ್ಮನಾಭ ಪನಿಕ್ಕರ್ ಅವರ ಸಮಾಧಿ ಸ್ಥಳವಾಗಿದೆ. ಇಲವುಂತಿಟ್ಟ ಇಂದು ಪುಟ್ಟ ಹಳ್ಳಿಯಾಗಿದ್ದು ಪಥನಂತಿಟ್ಟ ಪ್ರದೇಶದಿಂದ 12 ಕೀ.ಮಿ ದೂರದಲ್ಲಿದೆ. ಮುಲ್ಲೂರ ಸಮರಕಂ ಎಂದು ಕರೆಯಲ್ಪಡುವ ಸಮಾಧಿ ಸ್ಥಳವು ಮೊದಲು ಕವಿ ಹಾಗೂ ಸಮಾಜ ಸುಧಾರಕ ಮುಲ್ಲೂರ ಎಸ್. ಪದ್ಮನಾಭ ಅವರ ಮನೆಯಾಗಿದ್ದು, ಅವರ ಕಾಲಾವಧಿಯ ನಂತರ ಆ ಸ್ಥಳದಲ್ಲಿಯೇ ಸಮಾಧಿಯನ್ನು ನಿರ್ಮಿಸಲಾಯಿತು. ಇದರ ಜವಾಬ್ದಾರಿಯನ್ನು ಕೇರಳ ರಾಜ್ಯ ಸಾಂಸ್ಕೃತಿಕ ಇಲಾಖೆ ವಹಿಸಿಕೊಂಡಿದೆ. ಈ ಸ್ಥಳವು ಇತಿಹಾಸಹಾರರಿಗೆ ಹಾಗೂ ಪ್ರವಾಸಿಗರಿಗೆ ಅತ್ಯಂತ ನೆಚ್ಚಿನ ಹಾಗೂ ಆಕರ್ಷಣೀಯ ಸ್ಥಳವಾಗಿದೆ.


Click it and Unblock the Notifications