ವೈವಿಧ್ಯತೆಯಲ್ಲಿ ಏಕತೆಯನ್ನು ತೋರಿಸುವ ಪಾರಾದೀಪ್ ನ ಜಗನ್ನಾಥ ದೇವಸ್ಥಾನ ಭಾರತದ ಜಾತ್ಯತೀತತೆಗೆ ಒಂದು ಅದ್ಭುತ ಉದಾಹರಣೆ. ಪ್ರವೇಶ ದ್ವಾರದಲ್ಲಿ ಇರುವ 60 ಅಡಿ ಎತ್ತರದ ಅರುಣ ಸ್ತಂಭ ಮತ್ತು ಅದರ ಮೇಲೆ ಇರುವ ಸಿಮೆಂಟಿನ ಕಮಾನು ದೇವಸ್ಥಾನಕ್ಕೆ ಸೊಬಗನ್ನು ತಂದಿದೆ. ಇದರಲ್ಲಿ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಮತ್ತು ಸಿಖ್ ಧರ್ಮದ ಸಂಕೇತಗಳನ್ನು ಕೆತ್ತಲಾಗಿದೆ. ಈ ಸ್ಥಳ ಯಾವತ್ತೂ ಕೋಮು ಗಲಭೆಗೆ ಸಾಕ್ಷಿಯಾಗಿಲ್ಲ.
ವಾರ್ಷಿಕ ರಥಯಾತ್ರೆ ಅಥವಾ ರಥೋತ್ಸವದಲ್ಲಿ ಹಿಂದೂಗಳು ಮಾತ್ರವಲ್ಲ ಹಿಂದೂ ಅಲ್ಲದವರು ಕೂಡ ರಥವನ್ನು ಎಳೆಯುತ್ತಾರೆ. ಯಾವುದೇ ಧರ್ಮೀಯರಿಗೆ ಪ್ರವೇಶವಿರುವ ರಾಜ್ಯದ ಏಕೈಕ ಜಗನ್ನಾಥ ದೇವಸ್ಥಾನಕ್ಕೆ ವಿದೇಶಿಯರು ಕೂಡ ಭೇಟಿ ನೀಡುತ್ತಾರೆ. ಇಲ್ಲಿ ದರ್ಶನಕ್ಕೆಂದು ಬಂದಾಗ ದೇವಸ್ಥಾನದ ಅಡುಗೆಮನೆಯಲ್ಲಿ ತಯಾರಿಸುವ ಪ್ರಸಾದ ಅಥವಾ ಅಭಾದ ಸವಿಯಲು ಪ್ರವಾಸಿಗರು ಮರೆಯಬಾರದು.


Click it and Unblock the Notifications