Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾರಾದೀಪ್ » ಹವಾಮಾನ

ಪಾರಾದೀಪ್ ಹವಾಮಾನ

ನವೆಂಬರ್ ನಿಂದ ಮಾರ್ಚ್ ವರೆಗೆ ಪಾರಾದೀಪ್ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ. ಪಾರಾದೀಪ್ ಗೆ ಈ ಸಮಯದಲ್ಲಿ ಪ್ರವಾಸಿಗರ ಒಳಹರಿವು ಹೆಚ್ಚು ಇರುತ್ತದೆ. ಏಕೆಂದರೆ ವಾತಾವರಣ ತಂಪಾಗಿ ಹಿತಕರವಾಗಿರುತ್ತದೆ. ಸಂಜೆ ಮತ್ತು ರಾತ್ರಿಯ ಹೊತ್ತು ಚಳಿ ಏರುವುದರಿಂದ ಬೆಚ್ಚಗಿನ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದು ಹೆಚ್ಚು ಸೂಕ್ತ.

ಬೇಸಿಗೆಗಾಲ

ಮಾರ್ಚ್ ನಲ್ಲಿ ಬೇಸಿಗೆ ಶುರುವಾಗುತ್ತಿದ್ದಂತೆ ಪಾರಾದೀಪನಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿರುತ್ತದೆ. ಉರಿಯುತ್ತಿರುವ ಸೂರ್ಯನಿಂದಾಗಿ ವಾತಾವರಣದಲ್ಲಿ ತೇವದ ಪ್ರಮಾಣ ಹೆಚ್ಚಾಗಿ ಧಗೆ ತಾಳಲಾಗದಂತೆ ಆಗುತ್ತದೆ. ಮೇ ತಿಂಗಳಲ್ಲಿ ಉಷ್ಣಾಂಶವು ಸುಮಾರು 41ಡಿಗ್ರಿ ಸೆಲ್ಶಿಯಸವರೆಗು ಏರಿ ಬೇಸಿಗೆಕಾಲವು ಕೊನೆಯಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಪಾರಾದೀಪ್ ಗೆ ಪ್ರಯಾಣ ಬೆಳೆಸುವುದು ಸೂಕ್ತ ಅಲ್ಲವೇ ಅಲ್ಲ.

ಮಳೆಗಾಲ

ಮುಂಗಾರಿನಲ್ಲಿ ಪಾರಾದೀಪ್ ನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತದೆ. ಮೇನಿಂದ ಸೆಪ್ಟೆಂಬರ್ ವರೆಗೆ ಮಳೆಗಾಲ ಇರುತ್ತದೆ. ಅಕ್ಟೋಬರ್ ನಲ್ಲಿ ಆಗಾಗ ಮಳೆಯಾಗುತ್ತಿರುತ್ತದೆ. ವಾರ್ಷಕವಾಗಿ ಸರಾಸರಿ 1480 ಮಿ.ಮೀ. ಮಳೆಯಾಗುತ್ತದೆ.

ಚಳಿಗಾಲ

ಅಕ್ಟೋಬರ್ ಕೊನೆಯಲ್ಲಿ ಚಳೆಗಾಲ ಕಾಲಿಡುತ್ತದೆ. ನವೆಂಬರ್ ಮಧ್ಯದವರೆಗೆ ವಾತಾವರಣ ಹಿತಕರವಾಗಿರುತ್ತದೆ. ನಂತರ ಚಳಿಗಾಳಿ ಶುರುವಾಗುತ್ತದೆ. ಒರಿಸ್ಸಾದ ಇತರ ಪ್ರದೇಶಗಳಂತೆ ಚಳಿಗಾಲದಲ್ಲಿ ಚಳಿ ಜಾಸ್ತಿಯಾಗಿರುತ್ತದೆ. ರಾತ್ರಿಗಳಲ್ಲಿ 9 ಡಿಗ್ರಿವರೆಗೆ ಕುಸಿಯುತ್ತದೆ. ಮಾರ್ಚ್ ಆರಂಭದವರೆಗೆ ಚಳಿಗಾಲ ಇರುತ್ತದೆ.