ಕಾಳಿ ಮಾತಾ ಮಂದಿರವು ರಾಷ್ಟ್ರೀಯ ಹೆದ್ದಾರಿ 22ರಲ್ಲಿದೆ. ಇದು ಕಲ್ಕಾ ಪಟ್ಟಣದಲ್ಲಿದೆ. ಈ ಪುರಾತನ ಕಾಳಿ ಮಂದಿರವು ಹಿಂದೂಗಳ ಪ್ರಸಿದ್ಧ ಯಾತ್ರಾಸ್ಥಳ. ನವರಾತ್ರಿ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇದು ಈ ಪ್ರದೇಶದ ಪ್ರಸಿದ್ಧ ಹಿಂದೂ ಯಾತ್ರಾಸ್ಥಳ.
ಈ ದೇವಾಲಯಕ್ಕೆ ಧಾರ್ಮಿಕ ಮತ್ತು ಪೌರಾಣಿಕ ಮಹತ್ವವಿದೆ. ಇದು ಮಹಾಭಾರತ ಕಾಲಕ್ಕೆ ಸೇರಿದ್ದು ಎಂದು ಹೇಳಲಾಗುತ್ತದೆ. ಅಜ್ಞಾತವಾಸದ ಅವಧಿಯಲ್ಲಿ ಪಾಂಡವರು ಇದನ್ನು ಕಟ್ಟಿದರು ಎಂದು ಹೇಳಲಾಗುತ್ತದೆ.ಪಂಚಕುಲದಲ್ಲಿ ಶಿವನ ಆರಾಧನೆ ಪ್ರಸಿದ್ಧವಾದದ್ದು. ಶಿವನೊಂದಿಗೆ ಶಕ್ತಿಯನ್ನು ಕೂಡ ಆರಾಧಿಸಲಾಗುತ್ತದೆ. ಈ ದೇವತೆಯನ್ನು ದುರ್ಗಾ, ಕಾಳಿಕಾ, ಚಂಡಿ, ನೈನಾ, ಮಾನಸ, ಶಾರದಾ, ಅಂಬಿಕಾ, ಕಾಳಿ ಮತ್ತು ಭವಾನಿ ಎನ್ನುವ ಹೆಸರುಗಳಿಂದ ಕೂಡ ಪೂಜಿಸಲಾಗುತ್ತದೆ.
ಕಲ್ಕಾವು ಹಿಮಾಚಲ ಪ್ರದೇಶದ ಪ್ರವೇಶದ್ವಾರವಿದ್ದಂತೆ. ಇದು ಚಂಡಿಗಢದಿಂದ 14ಕಿಮೀ ದೂರದಲ್ಲಿದೆ. ಮತ್ತು ಕಲ್ಕಾ ಶಿಮ್ಲಾ ರೈಲು ಮಾರ್ಗದ ಕೊನೆಯ ನಿಲ್ದಾಣ. ಕಾಳಿ ದೇವಾಲಯದಿಂದಾಗಿ ಈ ಪಟ್ಟಣಕ್ಕೆ ಈ ಹೆಸರು ಬಂದಿದೆ. ರೈಲಿನ ಮೂಲಕ ಇಲ್ಲಿಗೆ ಪ್ರಯಾಣ ಮಾಡುವುದು ಒಂದು ಅಭೂತಪೂರ್ವ ಸಾಹಸಮಯ ಅನುಭವ. ರೈಲು 103 ಸುರಂಗಗಳ ಮೂಲಕ ಹಾದು ಈ ಸ್ಥಳವನ್ನು ತಲಪುತ್ತದೆ.


Click it and Unblock the Notifications