Search
  • Follow NativePlanet
Share
ಮುಖಪುಟ » ಸ್ಥಳಗಳು » ಪಣಜಿ » ಆಕರ್ಷಣೆಗಳು » ಕಸೀನೊ ರಾಯಲ್

ಕಸೀನೊ ರಾಯಲ್, ಪಣಜಿ

4

ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದಾಗ ಭಾರತದಲ್ಲಿ ಜೂಜಾಟವು ಅಷ್ಟೊಂದು ಪ್ರಮಾಣದಲ್ಲಿ ಬೆಳೆದಿಲ್ಲ ಎನ್ನುವುದು ಸಹಜ ಅಭಿಪ್ರಾಯವಾಗಿದೆ. ಆದರೂ ನಿಮಗೆ ಇದರ ಅನುಭವ ಪಡೆಯುವ ಇಚ್ಛೆಯಿದ್ದಲ್ಲಿ...ಭೇಟಿ ನೀಡಿರಿ ಗೋವಾದಲ್ಲಿರುವ ಕಸೀನೊ ರಾಯಲ್, ಭಾರತದ ಕೇವಲ ಒಂದೆ ಒಂದು ತೇಲುವ ಜೂಜಾಟ ಕೇಂದ್ರ. ಮಾಂಡೋವಿ ನದಿಯಿಂದ ಪ್ರಾರಂಭವಾಗುವ ಕಸೀನೊ ರಾಯಲನ್ನು ಹೊಂದಿದ ಹಡುಗು ಕ್ರಮೇಣವಾಗಿ ಸಮುದ್ರ ಸೇರಿದ ನಂತರ ಜೂಜಾಟದ ಚಟುವಟಿಕೆಗಳು ಪ್ರಾರಂಭಗೊಳ್ಳುತ್ತವೆ. ಇಲ್ಲಿ ಆಡಲ್ಪಡುವ ಆಟಗಳೆಂದರೆ ಅಮೇರಿಕನ್ ರೌಲೇಟ್, ಪೋಕರ್, ಬ್ಲ್ಯಾಕ ಜಾಕ್, ಮನಿ ವ್ಹೀಲ್, ಬಕ್ಕಾರಾಟ್, ಪೊಂಟೂನ್, ಕ್ರ್ಯಾಪ್ಸ್ ಮತ್ತು ಸ್ಲಾಟ್ ಮಷಿನ್ಸ್. ಇಲ್ಲಿ VVIP ಗಳಿಗೂ ಕೂಡ ಪ್ರತ್ಯೇಕವಾದ ಆಟದ ಕೊಠಡಿಯಿದೆ.ಈ ಹಡಗಿನಲ್ಲಿ ಕೇವಲ ಜೂಜಾಟ ಮಾತ್ರವಲ್ಲದೆ ಹಲವು ಬಗೆಯ ಇತರೆ ಮನರಂಜನಾ ವ್ಯವಸ್ಥೆಗಳು ಇಲ್ಲಿದ್ದು ಅವುಗಳಲ್ಲಿ ವಿಶೇಷವದುದು ಚೈನಾ ಗಾರ್ಡನರವರಿಂದ ಉಪಚರಿಸಲ್ಪಡುವ ರಾತ್ರಿ ಊಟ ಮತ್ತು ಕ್ಯಾಂಡಲ್ ಲೈಟ್ ವ್ಯವಸ್ಥೆ. ಇನ್ನು ಇಲ್ಲಿಯ ಸಿಬ್ಬಂದಿ ವರ್ಗ ಸ್ನೇಹಮಯಿಯಾಗಿದ್ದು ಯಾವುದೆ ಆತಂಕ ದುಮ್ಮಾನಗಳಿಲ್ಲದೆ ಸಮಯ ಕಳೆಯಬಹುದು. ರಷ್ಯಾ ತಂಡದ ಬೆಲ್ಲಿ ನೃತ್ಯವನ್ನು ಆನಂದಿಸಬಹುದು. ಇದರಲ್ಲಿ ಪ್ರವೇಶಿಸಲು ಪ್ರತಿ ಜೊತೆಗೆ 4000 ರೂ ಶುಲ್ಕವಿದ್ದು ಅದರಲ್ಲಿ 3000 ರೂ ಬೆಲೆಯ ಕೂಪನಗಳನ್ನು ಹಿಂತಿರುಗಿಸಲಾಗುತ್ತದೆ ಅದು ಕೂಡ ಊಟ ಮತ್ತು ಮದ್ಯದ ಜೊತೆ. ಅಂದ ಹಾಗೆ ಇದೊಂದು ಜೂಜಾಟ ಕೇಂದ್ರವಾಗಿರುವುದರಿಂದ ನೀವು ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಬಹುದು. ಮೊದಲನೆಯ ಬಾರಿಗೆ ಆಡುವವರನ್ನು ಹಿಡಿದು ಅನುಭವವುಳ್ಳ ಆಟಗಾರರಿಗನುಸಾರವಾಗಿ ವಿವಿಧ ಸ್ತರಗಳಲ್ಲಿ ಆಟಗಳು ಇಲ್ಲಿವೆ. ಇನ್ನು ನಿವೇನಾದರು ಮಕ್ಕಳನ್ನು ಹೇಗೆ ಕರೆದುಕೊಂಡು ಹೋಗುವುದೆಂಬ ಆತಂಕದಲ್ಲಿದ್ದರೆ, ಚಿಂತಿಸಲೇ ಬೇಡಿ. ಮಕ್ಕಳಿಗೆಂದೆ ವಿಶೇಷವಾದ ಮಲುಗುವ ಕೊಣೆಗಳಿದ್ದು, ನೀವು ನಿರಾತಂಕವಾಗಿ ಕಾಲ ಕಳೆಯಬಹುದು. ಮಕ್ಕಳಿಗಾಗಿ ಆಟದ ಜಾಗವೂ ಕೂಡ ಇಲ್ಲಿದೆ.ಇಷ್ಟೆ ಅಲ್ಲ, ಹಲವಾರು ಖ್ಯಾತನಾಮರನ್ನು ಕೂಡ ಇಲ್ಲಿ ಕಾಣಬಹುದು. ಇದರಲ್ಲಿ ಕಳೆಯುವ ಪ್ರತಿಯೊಂದು ಕ್ಷಣವು ನಿಮಗೆ ವಿದೇಶದಲ್ಲಿರುವಂತಹ ಅನುಭವವನ್ನು ನೀಡುತ್ತದೆ. ಇಲ್ಲಿಗೆ ತಲುಪಲು ಅಷ್ಟೊಂದು ಆಯಾಸ ಪಡಬೇಕಾಗಿಲ್ಲ. ಕ್ಯಾಬ ಡ್ರೈವರಗೆ ಈ ಸ್ಥಳದ ಹೆಸರನ್ನು ಹೇಳಿದರೆ ಸಾಕು ಅವನಾಗೆ ನಿಮ್ಮನ್ನು ಇಲ್ಲಿಗೆ ತಲುಪಿಸುತ್ತಾನೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat