ಇಡುಂಬನ್ ಬೆಟ್ಟದ ಮೇಲಿರುವ ಇಡುಂಬನ್ ದೇವಾಲಯವು ಅಗಸ್ತ್ಯ ಋಷಿಯ ಕಾಲದಿಂದಲೂ ಪ್ರಸಿದ್ಧವಾಗಿದೆ. ಪುರಾಣಗಳ ಪ್ರಕಾರ ಋಷಿಯು ತನ್ನ ಸಹಾಯಕನಾಗಿದ್ದ ಇಂಡುಬನಿಗೆ ಶಿವಗಿರಿ ಮತ್ತು ಶಕ್ತಿಗಿರಿಯನ್ನು ಭಾರತದಲ್ಲಿ ತನ್ನ ನಿವಾಸಸ್ಥಾನಕ್ಕಾಗಿ ತೆಗೆದುಕೊಳ್ಳಲು ಹೇಳಿದನಂತೆ. ಇಂಡುಬನು ದೇವಾಸುರರ ಯುದ್ಧದಲ್ಲಿ ಬದುಕಿ ಉಳಿದಿದ್ದ ಅಸುರರಲ್ಲಿ ಒಬ್ಬ. ಯುದ್ಧದ ನಂತರ ಇಂಡುಬನ್ ಮುರುಗನ ಭಕ್ತನಾದ. ಈ ದೇವಸ್ಥಾನ ಮತ್ತು ಬೆಟ್ಟಕ್ಕೆ ಅವನ ಹೆಸರನ್ನೇ ಇಡಲಾಗಿದೆ. ಇಲ್ಲಿ ಆಚರಿಸಲಾಗುವ ಮುಖ್ಯ ಹಬ್ಬಗಳು ಪಾನ್ಗುನಿ ಉತ್ತಿರಂ, ತಾಯೈ ಪೋಸಂ ಮತ್ತು ತಿರುಕಾರ್ತಿಕೈ. ಪಳನಿಗೆ ಹೋದವರು ಮುರುಗನಲ್ಲಿ ಬೇಡಿಕೊಂಡಿದ್ದು ಪೂರ್ಣಗೊಳ್ಳಬೇಕಾದರೆ ಇಡುಂಬನಿಗೂ ಪೂಜೆ ಸಲ್ಲಿಸಬೇಕೆಂದು ನಂಬುತ್ತಾರೆ.


Click it and Unblock the Notifications