ತಶಿ ಜೊಂಗ್ ಮಠ ಪಾಲಂಪೂರ್ ನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದ್ದು ಹಲವಾರು ಟಿಬೇಟಿಯನ್ ನಿರಾಶ್ರಿತರ ಆಶ್ರಯ ತಾಣವಾಗಿದೆ. ಇದು ಧಾರ್ಮಿಕ ಕೇಂದ್ರವಾಗಿರುವುದಕ್ಕಿಂತ ಹೆಚ್ಚು ಸಮುದಾಯ ಕೇಂದ್ರವಾಗಿದೆ. ಬಾಗಿರುವ ಛಾವಣಿಗೆ ಕೆಂಪು ಬಂಗಾರದ ಬಣ್ಣದಿಂದ ಲೇಪ ನೀಡಲಾಗಿದ್ದು ಪ್ರಾರ್ಥನಾ ಧ್ವಜದಂತೆ ಕಾಣುತ್ತದೆ. ಶಾಂತಿಯನ್ನು ಅರಸುವವರು ಮತ್ತು ಬೌದ್ದ ಯಾತ್ರಿಕರು ಇಲ್ಲಿಗೆ ಆಗಾಗ ಭೇಟಿ ನೀಡುತ್ತಾರೆ. ಮಠದ ಗೋಡೆಗಳು ಟಿಬೇಟಿಯನ್ ಸಂಸ್ಕ್ರತಿ ಮತ್ತು ಕಲೆಯನ್ನು ಅನಾವರಣಗೊಳಿಸುತ್ತವೆ. ಬೌದ್ದರ ಆದ್ಯಾತ್ಮಿಕ ಸಂಕೇತವಾದ ಸ್ತೂಪ, ಮಠದ ಒಳಗಿದ್ದು ದೇವಸ್ಥಾನವೊಂದರ ಕಲಾ ನೈಪುಣ್ಯತೆಯನ್ನು ಅರಿತುಕೊಳ್ಳಬಹುದು.
ಟಿಬೇಟಿಯನ್ ಕಲಾಕೃತಿಗಳು, ಚಿತ್ರಗಳು ಮತ್ತು ಲೇಖನಗಳು ಮಠಧ ಕ್ರಾಫ್ಟ್ ಎಂಪೋರಿಯಂನಲ್ಲಿ ಗೋಚರಿಸುತ್ತವೆ. ಇದರ ಜೊತೆಗೆ ಮ್ಯಾಗ್ನಿಫಿಸಂಟ್ ರೆಸ್ಟೋರೆಂಟ್ ಗಳು ಮತ್ತು ಕ್ರಾಫ್ಟ್ ಎಂಪೋರಿಯಂಗಳು ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತದೆ.


Click it and Unblock the Notifications