ಬುಂದ್ಲಾ ಮಾತಾ ದೇವಸ್ಥಾನ ಕಂಗ್ರ ಜಿಲ್ಲೆಯ ನಗರದಲ್ಲಿ ನೆಲೆ ನಿಂತಿದ್ದು ಈ ಭಾಗದ ಪ್ರಮುಖ ಹಿಂದೂ ಶೃದ್ದಾ ಕೇಂದ್ರವಾಗಿದೆ. ಐದು ಶತಮಾನಗಳ ಹಿಂದೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದ್ದು ಈ ಭಾಗದ ಅತ್ಯಂತ ಪ್ರಾಚೀನ ಮತ್ತು ಪವಿತ್ರ ಮಂದಿರ ಇದಾಗಿದೆ. ಹಚ್ಚ ಹಸಿರು ಚಹ ತೋಟಗಳ ಮಧ್ಯೆ ಈ ದೇವಸ್ಥಾನವಿರುವುದರಿಂದ ಇದರ ಸೌಂದರ್ಯ ಇಮ್ಮಡಿಯಾಗಿದೆ. ದೇವಸ್ಥಾನದ ರಚನೆ ಇತಿಹಾಸ ಪೂರ್ವ ವರ್ಣನೆಯನ್ನು ನೀಡುತ್ತದೆ.
ದೇವಸ್ಥಾನದಲ್ಲಿ ನಡೆಸಲಾಗುವ ಆಚರಣೆಗಳು ವಿಭಿನ್ನ ಹಾಗೂ ಹಲವಾರು ಶತಮಾನಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಸುಲಭವಾಗಿ ತಲುಪಬಹುದಾದ ಪ್ರದೇಶದಲ್ಲಿ ದೇವಸ್ಥಾನವಿರುವುದರಿಂದ ದೂರದೂರಿನ ಪ್ರವಾಸಿಗರೂ ಇಲ್ಲಿ ತುಂಬಿಕೊಂಡಿರುತ್ತಾರೆ.


Click it and Unblock the Notifications