ಬೈಸರನ್ ಎಂಬ ಸ್ಥಳವು ಪಹಲ್ಗಾಂನಿಂದ 5 ಕಿ.ಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ 2438 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇಲ್ಲಿಂದ ಪ್ರವಾಸಿಗರು ಕಣ್ಣು ಹಾಯಿಸಿದಷ್ಟು ಹಿಮಚ್ಛಾಧಿತ ಪರ್ವತಗಳು, ದಟ್ಟ ಕಾಡು ಮತ್ತು ಅತ್ಯಾಕರ್ಷಕ ಹುಲ್ಲುಗಾವಲುಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು. ಇಲ್ಲಿನ ಬೆಟ್ಟದ ತುದಿಯಲ್ಲಿ ನಿಂತು ಮನಮೋಹಕವಾದ ಲಿಡ್ಡರ್ ನದಿ ಕಣಿವೆ ಮತ್ತು ಪಹಲ್ಗಾಂ ಕಣಿವೆಗಳನ್ನು ನೋಡಬಹುದು. ಈ ಸ್ಥಳವು ಯೂರೋಪಿಯನ್ ಮಾದರಿಯ ರೆಸಾರ್ಟನ್ನು ಹೋಲುತ್ತದೆ. ಅಲ್ಲದೆ ಇದೊಂದು ಜನಪ್ರಿಯ ವಿಹಾರ ಮತ್ತು ಶಿಬಿರದ ತಾಣವಾಗಿ ಸಹ ಖ್ಯಾತಿ ಪಡೆದಿದೆ.


Click it and Unblock the Notifications