ಜಟಾ ಶಂಕರ ಗುಹೆ ಒಂದು ನೈಸರ್ಗಿಕ ನೆಲ ಗುಹೆಯಾಗಿದೆ. ಇದು ಶೈವ ಸಂಪ್ರದಾಯದ ಆರಾಧನಾ ಸ್ಥಳವಾಗಿದೆ. ಗುಹೆಯ ಒಳಭಾಗದಲ್ಲಿ ದೊಡ್ಡ ಶಿವನ ಮೂರ್ತಿ ಇದೆ. ಈ ಶಿವಲಿಂಗ ನಿಸರ್ಗದತ್ತವಾಗಿ ನಿರ್ಮಿತವಾಗಿದೆ ಎನ್ನಲಾಗಿದೆ. ಪುರಾಣದ ಪ್ರಕಾರ, ಶಿವ, ಭಸ್ಮಾಸುರನಿಂದ ಅಡಗಿ ಕುಳಿತ ಸ್ಥಳ ಇದು ಎನ್ನಲಾಗಿದೆ. ಅಲ್ಲದೆ ಈ ಗುಹೆಯು ಹಿಂದೂ ಪುರಾಣದಲ್ಲಿ ಬರುವ ಶೇಷ್ನಾಗ್ ಎನ್ನಲಾದ ನೂರು ತಲೆಯ ಹಾವಿನ ವಿಗ್ರಹ ಇಲ್ಲಿ ಪ್ರಾಕೃತಿಕವಾಗಿ ಮೂಡಿದೆ ಎನ್ನಲಾಗಿದೆ.
ಈ ಗುಹೆಯ ಕಲ್ಲುಗಳು ಶಿವನ ಜಡೆಯ ಕೂದಲಿನಂತೆ ಇದೆ ಎನ್ನಲಾಗಿದೆ. ಆದ್ದರಿಂದ ಈ ಗುಹೆಗೆ ಜಟಾ ಶಂಕರ ಗುಹೆ ಎಂದು ಕರೆಯುತ್ತಾರೆ. ಜಟಾ ಎಂದರೆ ಕೂದಲು ಮತ್ತು ಶಂಕರ ಎಂದರೆ ಶಿವ ಆಗಿದೆ. ಜಂಬು ದ್ವೀಪ ಹೊಳೆ ಇಲ್ಲಿಯೇ ಹುಟ್ಟುತ್ತದೆ. ಇದು ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಸುಂದರ ಸ್ಥಳವೆನ್ನಬಹುದು.


Click it and Unblock the Notifications