Search
  • Follow NativePlanet
Share
ಮುಖಪುಟ » ಸ್ಥಳಗಳು » ಪಚಮಡಿ » ಹವಾಮಾನ

ಪಚಮಡಿ ಹವಾಮಾನ

ಪಚಮಡಿ ವರ್ಷಪೂರ್ತಿ ಸುಂದರವಾಗಿರುತ್ತದೆ. ಆದರು ಅಕ್ಟೋಬರ್ ನಿಂದ ಜೂನ್ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಈ ಸಮಯದಲ್ಲಿ ಆಚರಿಸಲಾಗುವ ದಸರಾ ಮತ್ತು ನವರಾತ್ರಿ ಹಬ್ಬಗಳು ಸುಂದರವಾಗಿರುತ್ತದೆ.

ಬೇಸಿಗೆಗಾಲ

ಪಚಮಡಿಯಲ್ಲಿ ಬೇಸಿಗೆ ಆಹ್ಲಾದಕರವಾಗಿರುತ್ತದೆ. ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ. ಏಪ್ರಿಲ್ ನಿಂದ ಜೂನ್ ವರೆಗೆ ಬೇಸಿಗೆ ಸಮಯ. ಬೇಸಿಗೆಯ ಸೂರ್ಯನ ಕಿರಣವನ್ನು ಆನಂದಿಸಬಹುದು ಏಕೆಂದರೆ ಇಲ್ಲಿ ಅಷ್ಟೊಂದು ಸೆಖೆ ಇರುವುದಿಲ್ಲ.

ಮಳೆಗಾಲ

ಜುಲೈ ನಿಂದ ಸೆಪ್ಟೆಂಬರ್ ಇಲ್ಲಿ ಮಳೆಗಾಲ. ಈ ಸಮಯದಲ್ಲಿ ಇಲ್ಲಿ ಹದವಾಗಿ ಮಳೆ ಸುರಿಯುತ್ತದೆ. ಇಲ್ಲಿ ಜಲಪಾತಗಳು ಹೆಚ್ಚಿರುವುದರಿಂದ ಮಳೆಗಾಲವು ಇಲ್ಲಿಗೆ ಭೇಟಿ ನೀಡಲು ಉತ್ತಮ ಕಾಲ. ಈ ಸಂದರ್ಭದಲ್ಲಿ ಜಲಪಾತಗಳು ತುಂಬಿ ಹರಿಯುತ್ತಿರುತ್ತದೆ.

ಚಳಿಗಾಲ

ನವೆಂಬೆರ್ ನಿಂದ ಫೆಬ್ರವರಿ ಇಲ್ಲಿ ಚಳಿಗಾಲ. ಚಳಿಗಾಲದಲ್ಲಿ ಇಲ್ಲಿನ ತಾಪಮಾನ 4 ಡಿಗ್ರಿ ಸೆಲ್ಸಿಯಸ್ ವರೆಗೆ ಕುಸಿಯುತ್ತದೆ. ಚಳಿಗಾಲ ಸ್ವಲ್ಪ ತಂಪಾಗಿರುತ್ತದೆ. ಈ ಸಮಯದಲ್ಲಿ ಪ್ರವಾಸ ಹೊರಟರೆ ಚಳಿಗಾಲಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡು ಹೊರಡಬೇಕು.