ವೆಲ್ಲಾಂತೊಡೆ ಜಲಪಾತ ನಿಲಂಬೂರ್ ನ ಪ್ರಮುಖ ಜಲಪಾತಗಳಲ್ಲೊಂದಾಗಿದೆ. ಹಾಗೂ ಇದು ಬೆಟ್ಟದ ಮೇಲೆ ಇದ್ದು ಸುತ್ತಮುತ್ತಲೂ ಆಕರ್ಷಕ ನೋಟ ಕಾಣಸಿಗುತ್ತದೆ. ನಿಲಂಬೂರ್ ಪಟ್ಟಣದಿಂದ 27 ಕಿಮೀ ದೂರದಲ್ಲಿ ಈ ಅರೇಕೊಡೆ-ಮುಕ್ಕಾಮ್, ಕೋಳಿಕೋಡ್ ರಸ್ತೆ ಮಾರ್ಗದ ಮೂಲಕ ಪ್ರವೇಶಿಸಬಹುದು. ಹಾಗೂ ಇಲ್ಲಿ ಅನೇಕ ಬುಡಕಟ್ಟು ಜನಾಂಗಗಳು ವಸಿಸುತ್ತವೆ. ಜಲಪಾತದ ಸೊಬಗು ಸವಿಯಲು ಬರುವ ಪ್ರವಾಸಿಗರಿಗೆ, ನಿಸರ್ಗ ಪ್ರೇಮಿಗಳಿಗೆ ಹಾಗೂ ಸಾಹಸಿಗರಿಗೆ ವೆಲ್ಲಾಮ್ತೊಡೆ ಜಲಪಾತ ವೈಭವದ ಸ್ವಾಗತ ನೀಡುವುದರ ಜೊತೆಗೆ ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ.