Search
  • Follow NativePlanet
Share
» »ದುಬೈಗೆ ಹೋಗುವ ಪ್ಲಾನ್‌ ಇದೆಯಾ, ಹಾಗಾದ್ರೆ ನಿಮಗಿದೆ ಗುಡ್ ನ್ಯೂಸ್… ಭಾರತೀಯರಿಗೆ ಹೊಸ ವೀಸಾ ನಿಯಮ

ದುಬೈಗೆ ಹೋಗುವ ಪ್ಲಾನ್‌ ಇದೆಯಾ, ಹಾಗಾದ್ರೆ ನಿಮಗಿದೆ ಗುಡ್ ನ್ಯೂಸ್… ಭಾರತೀಯರಿಗೆ ಹೊಸ ವೀಸಾ ನಿಯಮ

ದುಬೈಗೆ ಪ್ರಯಾಣಿಸುವ ಭಾರತೀಯರಿಗೆ ಒಂದು ಸಿಹಿ ಸುದ್ದಿ ಇದೆ. ಇನ್ನು ಮುಂದೆ ದುಬೈ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ನ ಇತರ ನಗರಗಳಿಗೆ ಪ್ರಯಾಣಿಸುವಾಗ ದುಬೈ ಪ್ರವಾಸಿ ವೀಸಾಕ್ಕಾಗಿ ಕಷ್ಟಪಡಬೇಕಾಗಿಲ್ಲ. ಈಗ ವೀಸಾ-ಆನ್-ಅರೈವಲ್ ಸೌಲಭ್ಯವನ್ನು ಪಡೆಯಬಹುದು. ಹೌದು, ಸಾಮಾನ್ಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಭಾರತೀಯ ನಾಗರಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಯುಎಇಗೆ ಪ್ರವೇಶಿಸುವ ಎಲ್ಲಾ ಸ್ಥಳಗಳಲ್ಲಿ ಆಗಮನದ ನಂತರ ವೀಸಾ ನೀಡಲಾಗುವುದು ಎಂದು ಯುಎಇಯಲ್ಲಿರುವ ಭಾರತೀಯ ಹೈಕಮಿಷನ್ ಹೇಳಿದೆ.

ಈ ವೀಸಾ 14 ದಿನಗಳವರೆಗೆ ಮಾನ್ಯವಾಗಿರುತ್ತದೆ. ಇದರಿಂದ ಅನಿವಾಸಿ ಭಾರತೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಯುಎಇ ನಡುವಿನ ಸಂಬಂಧಗಳು ಏರುಗತಿಯಲ್ಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಯಭಾರ ಕಚೇರಿಯ ಪ್ರಕಾರ, ದುಬೈನಲ್ಲಿರುವ ಭಾರತೀಯರ ಸಂಖ್ಯೆ ಸುಮಾರು 35 ಲಕ್ಷ. ಅಂದರೆ ಯುಎಇಯ ಜನಸಂಖ್ಯೆಗೆ ಭಾರತೀಯರು 42% ಕೊಡುಗೆ ನೀಡುತ್ತಾರೆ. ‌

UAE offers visa-on-arrival

ವೀಸಾ-ಆನ್-ಅರೈವಲ್ ಎಂದರೇನು?

ವೀಸಾ-ಆನ್-ಅರೈವಲ್ ಎಂಬುದು ಒಂದು ರೀತಿಯ ವೀಸಾ ಸೌಲಭ್ಯವಾಗಿದ್ದು, ಪ್ರಯಾಣಿಕರು ತಮ್ಮ ಗಮ್ಯಸ್ಥಾನವನ್ನು ತಲುಪಿದ ನಂತರ ಮಾತ್ರ ವೀಸಾವನ್ನು ಸ್ವೀಕರಿಸುತ್ತಾರೆ. ಸಾಂಪ್ರದಾಯಿಕ ವೀಸಾ ಅರ್ಜಿಗಿಂತ ಪ್ರಕ್ರಿಯೆಯು ಸರಳ ಮತ್ತು ವೇಗವಾಗಿರುತ್ತದೆ.

ವೀಸಾವನ್ನು ವಿಸ್ತರಿಸಬಹುದೇ?

ಅಮೆರಿಕ, ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟದ ಯಾವುದೇ ದೇಶ ನೀಡಿದ ಕನಿಷ್ಠ 6 ತಿಂಗಳವರೆಗೆ ಮಾನ್ಯವಾಗಿರುವ ವೀಸಾ, ರೆಸಿಡೆನ್ಸ್ ಅಥವಾ ಗ್ರೀನ್ ಕಾರ್ಡ್ ಹೊಂದಿರುವ ಭಾರತೀಯ ನಾಗರಿಕರು ಈ ಸೌಲಭ್ಯವನ್ನು ಪಡೆಯಬಹುದು ಎಂದು ಹೈಕಮಿಷನ್ ತಿಳಿಸಿದೆ. ಅಂತಹ ನಾಗರಿಕರು 14 ದಿನಗಳವರೆಗೆ ವೀಸಾ-ಆನ್-ಅರೈವಲ್ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ, ಅಗತ್ಯವಿದ್ದರೆ ಅದೇ ಅವಧಿಗೆ ವಿಸ್ತರಿಸಬಹುದು. ಯುಎಇ ಕಾನೂನಿನ ಪ್ರಕಾರ, ನಿಗದಿತ ಶುಲ್ಕವನ್ನು ಪಾವತಿಸಿದ ನಂತರ, ನೀವು 60 ದಿನಗಳವರೆಗೆ ವೀಸಾವನ್ನು ಪಡೆಯುತ್ತೀರಿ, ಅದನ್ನು ವಿಸ್ತರಿಸಲಾಗುವುದಿಲ್ಲ.

ಯಾವ ದೇಶಗಳು ಭಾರತೀಯರಿಗೆ ಈ ಸೌಲಭ್ಯವನ್ನು ಒದಗಿಸುತ್ತವೆ?

ಪ್ರಸ್ತುತ, ಭಾರತದ ನಾಗರಿಕರು 57 ದೇಶಗಳಿಗೆ ಪ್ರಯಾಣಿಸಲು ವೀಸಾ-ಮುಕ್ತ ಅಥವಾ ವೀಸಾ-ಆನ್-ಅರೈವಲ್ ಸೌಲಭ್ಯವನ್ನು ಪಡೆಯುತ್ತಾರೆ. ಜಪಾನ್, ದಕ್ಷಿಣ ಕೊರಿಯಾ, ಯುಎಇ ಹೊರತುಪಡಿಸಿ, ಭಾರತೀಯ ನಾಗರಿಕರು ಫಿಜಿ, ಇಂಡೋನೇಷ್ಯಾ, ಇರಾನ್, ಜಮೈಕಾ, ಜೋರ್ಡಾನ್, ನೈಜೀರಿಯಾ ಮತ್ತು ಕತಾರ್‌ನಲ್ಲಿ ವೀಸಾ-ಆನ್-ಅರೈವಲ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದಲ್ಲದೆ, ಮಲೇಷ್ಯಾ, ಥೈಲ್ಯಾಂಡ್, ನೇಪಾಳ, ಭೂತಾನ್, ಡೊಮಿನಿಕಾ, ಸರ್ಬಿಯಾ, ಅಲ್ಬೇನಿಯಾ, ಜಮೈಕಾ, ಕಾಂಬೋಡಿಯಾ, ಮಾಲ್ಡೀವ್ಸ್, ಶ್ರೀಲಂಕಾ, ಮಾರಿಷಸ್, ಮಡಗಾಸ್ಕರ್, ತಾಂಜಾನಿಯಾ, ಜಿಂಬಾಬ್ವೆ ಮತ್ತು ಟುನೀಶಿಯಾ ದೇಶಗಳಿಗೆ ವೀಸಾ ಮುಕ್ತವಾಗಿ ಪ್ರಯಾಣಿಸಬಹುದು.

ಏನೆಲ್ಲಾ ಅನುಕೂಲವಾಗಬಹುದು?

· ಪ್ರಯಾಣಿಕರು ಮುಂಚಿತವಾಗಿ ವೀಸಾಕ್ಕೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.

· ವಿಮಾನ ನಿಲ್ದಾಣ ಅಥವಾ ಗಡಿಯಲ್ಲಿ ವೀಸಾವನ್ನು ಪಡೆಯಬಹುದು, ಇದು ಪ್ರಯಾಣದ ಯೋಜನೆಗಳಿಗೆ ಅಡ್ಡಿಯಾಗುವುದಿಲ್ಲ.

· ಹೆಚ್ಚಿನ ದೇಶಗಳಲ್ಲಿ, ವೀಸಾ-ಆನ್-ಅರೈವಲ್ ಸಾಮಾನ್ಯವಾಗಿ 14 ಅಥವಾ 30 ದಿನಗಳಂತಹ ಸೀಮಿತ ಅವಧಿಗೆ ಇರುತ್ತದೆ.

· ಕೆಲವು ದೇಶಗಳಲ್ಲಿ, ಈ ಸೌಲಭ್ಯವು ಕೆಲವು ದೇಶಗಳ ನಾಗರಿಕರಿಗೆ ಮಾತ್ರ ಲಭ್ಯವಿರುತ್ತದೆ ಮತ್ತು ಪಾಸ್‌ಪೋರ್ಟ್‌ನ ಸಿಂಧುತ್ವ ಅಥವಾ ಇತರ ವೀಸಾಗಳನ್ನು ಹೊಂದಿರುವಂತಹ ಕೆಲವು ಷರತ್ತುಗಳು ಇದಕ್ಕೆ ಇರಬಹುದು. ಇಂತಹ ಸೌಲಭ್ಯಗಳು ಪ್ರಯಾಣವನ್ನು ಸರಳ ಮತ್ತು ಆರಾಮದಾಯಕವಾಗಿಸಲು ಸಹಾಯ ಮಾಡುತ್ತದೆ.

More News

Read more about: uae dubai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+