Search
  • Follow NativePlanet
Share
» »ಹೊಸ ಲುಕ್‌ನಲ್ಲಿ ಒನ್‌ಇಂಡಿಯಾ: ಹಿಂದೆಂದಿಗಿಂತಲೂ ವಿಶಿಷ್ಟವಾಗಿ ಓದುಗರ ಮುಂದೆ

ಹೊಸ ಲುಕ್‌ನಲ್ಲಿ ಒನ್‌ಇಂಡಿಯಾ: ಹಿಂದೆಂದಿಗಿಂತಲೂ ವಿಶಿಷ್ಟವಾಗಿ ಓದುಗರ ಮುಂದೆ

ಬೆಂಗಳೂರು, ಆಗಸ್ಟ್ 15: ಭಾರತೀಯರ ಮೆಚ್ಚಿನ ನ್ಯೂಸ್‌ ಪೋರ್ಟಲ್‌ ಒನ್‌ಇಂಡಿಯಾ ಇನ್ನುಮುಂದೆ ಹೊಸ ರೂಪದಲ್ಲಿ ಓದುಗರ ಮುಂದೆ ಬರಲಿದೆ. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಒನ್‌ಇಂಡಿಯಾ ಸಂಸ್ಥೆ ಹೊಸ ರೂಪಾಂತರವನ್ನು ಓದುಗರಿಗೆ ಪರಿಯಚಯಿಸಲು ಹೆಮ್ಮೆ ಪಡುತ್ತಿದೆ. ಡಿಜಿಟಲ್‌ ಮಾಧ್ಯಮದಲ್ಲಿ ಇನ್ನಷ್ಟು ವಿಕಸನಗೊಂಡು ಹಿಂದೆಂದಿಗಿಂತಲೂ ಓದುಗರಿಗೆ ಹೆಚ್ಚು ಹತ್ತಿರವಾಗುವ ಗುರಿಯೊಂದಿಗೆ ಒನ್‌ಇಂಡಿಯಾ ವಿನೂತನವಾಗಿ ರೂಪಾಂತರಗೊಂಡಿದೆ.

Oneindia Unveils Reimagined Identity

#ThereIsOnlyOneindia ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿರುವ ರೂಪಾಂತರಗೊಂಡ ಒನ್‌ಇಂಡಿಯಾ, ಮೊದಲಿನ ವಿಶ್ವಾಸಾರ್ಹತೆ, ಸ್ಪಷ್ಟತೆ, ವೇಗದಂತಹ ಸಕರಾತ್ಮಕ ಅಂಶಗಳೊಂದಿಗೆ ಹೊಸತನವನ್ನು ಅಳವಡಿಸಿಕೊಂಡು ಬದಲಾವಣೆಗೊಂಡಿದೆ. ಇದರಿಂದ ಓದುಗರಿಗೆ ಮತ್ತಷ್ಟು ಅವಕಾಶ ಸಿಗಲಿದ್ದು, ಪ್ರತಿಯೊಬ್ಬ ಭಾರತೀಯನ ಮನೆ-ಮನಗಳಿಗೂ ಒನ್‌ಇಂಡಿಯಾ ತಲುಪಲಿದೆ.

ಒನ್‌ಇಂಡಿಯಾ ಸಂಸ್ಥೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. 1999ರಲ್ಲಿ Indiainfo.com ಎನ್ನುವ ಹೆಸರಿನೊಂದಿಗೆ ಈ ಸಂಸ್ಥೆ ಆರಂಭವಾಯಿತು. ಸುಮಾರು 25 ವರ್ಷಗಳ ಸುಧೀರ್ಘ ಈ ಐತಿಹಾಸಿಕ ಪ್ರಯಾಣದಲ್ಲಿ ಬಹಳಷ್ಟು ಬದಲಾವಣೆಗಳಾಗಿದೆ. ತಂತ್ರಜ್ಞಾನದಲ್ಲಾದ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾ, ಓದುಗರ ಅಗತ್ಯತೆಯನ್ನು ಪೂರೈಸುತ್ತಾ ಇಂದು ಮಾಧ್ಯಮ ರಂಗದಲ್ಲಿ ಒನ್‌ಇಂಡಿಯಾ ಬಲಿಷ್ಠವಾಗಿ ಬೆಳೆದು ನಿಂತಿದೆ.

ಪ್ರಸ್ತುತ ಒನ್‌ಇಂಡಿಯಾ ಭಾರತದ ಪ್ರಮುಖ ನ್ಯೂಸ್‌ ಪೋರ್ಟಲ್‌ಗಳಲ್ಲಿ ಒಂದಾಗಿದೆ. ಬಹುಭಾಷಾ ತಾಣವಾಗಿರುವ ಈ ಸಂಸ್ಥೆ ಇಂಗ್ಲಿಷ್, ಹಿಂದಿ, ತಮಿಳು, ಕನ್ನಡ, ಮಲಯಾಳಂ, ತೆಲುಗು, ಮರಾಠಿ, ಗುಜರಾತಿ, ಒಡಿಯಾ, ಬೆಂಗಾಲಿ ಮತ್ತು ಪಂಜಾಬಿ ಭಾಷೆಗಳಲ್ಲಿ ಲಭ್ಯವಿದೆ. ಈ ಮೂಲಕ ಭಾರತದ ಪ್ರತಿ ಪ್ರೇಕ್ಷಕನ ಅಗತ್ಯತೆಯನ್ನು ಪೂರೈಸುವಲ್ಲಿ ಸಂಸ್ಥೆ ಬದ್ಧವಾಗಿದೆ.

200 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಬಳಕೆದಾರರನ್ನು ಹೊಂದಿರುವ ಒನ್‌ ಇಂಡಿಯಾ, ಭಾರತದಲ್ಲಿ ಐದರಲ್ಲಿ ಒಬ್ಬ ಇಂಟರ್‌ನೆಟ್ ಬಳಕೆದಾರನನ್ನು ಸಂಪರ್ಕಿಸುತ್ತದೆ. ಅಂದರೆ ದೇಶದ ಜನಸಂಖ್ಯೆಯಲ್ಲಿ ಸುಮಾರು 25%ರಷ್ಟು ಜನರನ್ನು ಒನ್‌ಇಂಡಿಯಾ ತಲುಪುತ್ತಿದೆ. ಒನ್‌ ಇಂಡಿಯಾ ತನ್ನ ದಕ್ಷತೆಯಿಂದ ರಾಷ್ಟ್ರದಾದ್ಯಂತ ವೈವಿಧ್ಯಮಯ ಪ್ರೇಕ್ಷಕರನ್ನು ಹೊಂದಿದೆ.

ವಿಶಿಷ್ಟವಾಗಿ ರೂಪಾಂತರಗೊಂಡ ಒನ್‌ ಇಂಡಿಯಾ

ಮರುವಿನ್ಯಾಸಗೊಳಿಸಲಾದ ಒನ್‌ ಇಂಡಿಯಾ ಲೋಗೋವನ್ನು ಬಹಳ ವಿಶಿಷ್ಟವಾಗಿ ರಚಿಸಲಾಗಿದ್ದು, ಪ್ರೇಕ್ಷಕರ ಸೃತಿ ಪಟಲದಲ್ಲಿ ಸ್ಥಿರವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಹೊಸತನವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಸಮಗ್ರವಾಗಿ, ಮುಕ್ತವಾಗಿ, ಮೌಲ್ಯಯುತವಾಗಿ ಒನ್‌ ಇಂಡಿಯಾ ಇನ್ನಷ್ಟು ವಿಕಸನಗೊಳ್ಳಲಿದೆ.

ಜೊತೆಗೆ ಓದುಗರ ಅಗತ್ಯತೆ, ಆಸಕ್ತಿಗಳನ್ನು ಪರಿಗಣಿಸಿ ಸೂಕ್ತವಾದ ವಿಷಯವನ್ನು ಒದಗಿಸುವ ಮೂಲಕ ಬಳಕೆದಾರರಿಗೆ ವಿಶೇಷ ಅನುಭವವನ್ನು ನೀಡಲಿದೆ. ಜೊತೆಗೆ ಮರುವಿನ್ಯಾಸಗೊಳಿಸಲಾದ ಒನ್‌ಇಂಡಿಯಾ, ಬಳಕೆದಾರರು ಮತ್ತು ಜಾಹೀರಾತುದಾರರ ನಡುವೆ ಸಂಬಂಧವನ್ನು ಉತ್ತೇಜಿಸುವ ವೇದಿಕೆಯಾಗಿದೆ. ಈ ರೂಪಾಂತರ, ಒನ್ ಇಂಡಿಯಾದ ಮಹತ್ವದ ಮೈಲುಗಲ್ಲಾಗಿದ್ದು, ಸಕಾರಾತ್ಮಕ ಫಲಿತಾಂಶದ ನಿರೀಕ್ಷೆಯಲ್ಲಿದೆ.

ವಿಶೇಷ ಪೋರ್ಟಲ್‌ಗಳ ನೆಲೆ ಒನ್‌ಇಂಡಿಯಾ

ಒನ್‌ಇಂಡಿಯಾ ವಿವಿಧ ವಿಶೇಷ ಪೋರ್ಟಲ್‌ಗಳ ನೆಲೆಯಾಗಿದ್ದು, ಪ್ರತಿಯೊಂದು ಕೂಡ ಓದುಗರ ನಿರ್ದಿಷ್ಟ ಆಸಕ್ತಿಗಳನ್ನು ಪೂರೈಸುತ್ತದೆ. ಕೇವಲ ನ್ಯೂಸ್‌ ಮಾತ್ರವಲ್ಲದೇ ಬಳಕೆದಾರನಿಗೆ ಈ ಕೆಳಗಿನ ಪೋರ್ಟಲ್‌ಗಳು ಪ್ರೇಕ್ಷಕರ ಆಯ್ಕೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.

ಫಿಲ್ಮಿಬೀಟ್ (FilmiBeat)- ಸಿನಿಮಾ, ಮನರಂಜನೆ
ಡ್ರೈವ್ ಸ್ಪಾರ್ಕ್ (DriveSpark)- ಆಟೋಮೋಟಿವ್
ಗುಡ್ ರಿಟರ್ನ್ಸ್ (GoodReturns) - ಹಣಕಾಸು
ಮೈಕೆಲ್ (MyKhel)- ಕ್ರೀಡೆ
ಗಿಜ್‌ಬಾಟ್ (GizBot)- ತಂತ್ರಜ್ಞಾನ
ನೇಟಿವ್ ಪ್ಲಾನೆಟ್ (NativeP lanet)- ಪ್ರವಾಸ

ಬೋಲ್ಡ್ ಸ್ಕೈ (BoldSky)-ಜೀವನಶೈಲಿ ಕೆರಿಯರ್‌ ಇಂಡಿಯಾ ( CareerIndia)-ಶಿಕ್ಷಣ ಹಿಟ್ಸ್‌ಫೀಡ್‌(HitzFeed)- ವೈರಲ್‌ ಸುದ್ದಿಗಳು

More News

Read more about: india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+