ನಂದಿ ಬೆಟ್ಟವನ್ನು ಸುತ್ತಿನೋಡುವಾಗ 600 ಮೀ ಎತ್ತರದ ಗುಡ್ಡವೊಂದನ್ನು ನೋಡಬಹುದು ಇದನ್ನು ಟಿಪ್ಪು ಡ್ರಾಪ್ ಎಂದು ಕರೆಯಲಾಗುತ್ತದೆ. ಐತಿಹಾಸಿಕ ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ಈ ಗುಡ್ಡದ ಮೇಲಿಂದ ಖೈದಿಗಳನ್ನು, ಶಿಕ್ಷೆಗೊಳಗಾದವರನ್ನು ಕೆಳಕ್ಕೆ ದೂಡಿ ಕೊಲ್ಲಲಾಗುತ್ತಿತ್ತಂತೆ. ಇದು ನಂದಿ ಬೆಟ್ಟದ ತುದಿಯಲ್ಲಿದ್ದು ಇಲ್ಲಿಂದ ಪ್ರವಾಸಿಗರು ಸುಂದರ ಗಿರಿ ಶ್ರೇಣಿಗಳನ್ನು ಕಾಣಬಹುದು .ಟಿಪ್ಪು ಡ್ರಾಪ್ ನ್ನು ಪ್ರಶಾಂತವಾದ ರಾತ್ರಿ ಸಮಯದಲ್ಲಿ ಭೇಟಿ ನೀಡುವ ಪ್ರವಾಸಿಗರು ಮರಗಳ ಎಲೆಗಳ ಮರ್ಮರ ಶಬ್ದ ಕೇಳಬಹುದು. ಸ್ಥಳೀಯರ ಪ್ರಕಾರ ಈ ಶಬ್ದವು ಅಲ್ಲಿಂದ ಬಿದ್ದು ಮೃತಪಟ್ಟಿದ್ದ ಕೈದಿಗಳ ಅಳಲು ಎನ್ನಲಾಗುತ್ತದೆಯಂತೆ.


Click it and Unblock the Notifications