ನೈನಾ ಮಲೈ ಎಂಬ ಸಣ್ಣ ಬೆಟ್ಟವು ನಾಮಕಲ್ ಪಟ್ಟಣದಿಂದ 10 ಕಿ.ಮೀ. ದೂರದಲ್ಲಿದೆ. ಇದು ತಿರುಮಲೈಪಟ್ಟಿ ಹಳ್ಳಿಯ ಸಮೀಪದಲ್ಲಿದೆ. ಈ ಸ್ಥಳಕ್ಕೆ 2 ಕಿ.ಮೀ. ದೂರವಿರುವ ಸೆಂಡಮಂಗಲಂ ನಿಂದ ಕೂಡ ಬರಬಹುದು. ಬೆಟ್ಟದ ಮೇಲೆ ಸ್ವಾಮಿ ವೆಂಕಟಾಜಲಪತಿಯವರ ದೇವಸ್ಥಾನವಿದೆ. ಪ್ರವಾಸಿಗಳು 2500 ಕ್ಕೂ ಹೆಚ್ಚು ಮೆಟ್ಟಲುಗಳನ್ನು ಹತ್ತಿ ಬೆಟ್ಟದ ಶಿಖರದಮೇಲಿರುವ ದೇವಸ್ಥಾನವನ್ನು ಸೇರಬಹುದು. ಹತ್ತಲು ಎಷ್ಟು ಕಷ್ಟವಾಗಿದ್ದರೂ ಭಕ್ತರು ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಬರುತ್ತಾರೆ. ಭಕ್ತರು ಶನಿವಾರದ ದಿನದಂದು, ಅದರಲ್ಲೂ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಬರುವ ತಮಿಳು ಪುರಟಾಚಿ (ಭಾದ್ರಪದ) ಮಾಸದಲ್ಲಿ ಭೇಟಿ ನೀಡುತ್ತಾರೆ.