ಬೋಟ್ ಹೌಸ್ ಕ್ಲಬ್ ಭಾರತದ ಎರಡನೇಯ ಹಳೆಯ ಕ್ಲಬ್. ಇದನ್ನು1890 ರಲ್ಲಿ ಸ್ಥಾಪಿಸಲಾಯಿತು. ಇದು ನೈನಿ ಸರೋವರದ ಉತ್ತರ ತುದಿಯಲ್ಲಿದೆ. ಈ ಕ್ಲಬ್ಬಿನ ಸದಸ್ಯತ್ವ ಸಮಾಜದ ಶ್ರೀಮಂತ ವರ್ಗದವರಿಗೆ ದೊರಕುತ್ತದೆ. ಈ ಕ್ಲಬ್ ಪ್ರತ್ಯೇಕವಾಗಿ ಸರೋವರದಲ್ಲಿ ಯಾಟಿಂಗ್ (Yatching) ಸೌಲಭ್ಯವಿದೆ.
ಪ್ರವಾಸಿಗರು, ಈ ಕ್ಲಬ್ ನಲ್ಲಿ ಒಳಾಂಗಣ ಕ್ರೀಡೆಗಳಾದ ಬಿಲಿಯರ್ಡ್ಸ್ ಹಾಗೂ ಶೂಟಿಂಗ್ ಆಟಗಳನ್ನು, ತಾತ್ಕಾಲಿಕ ಸದಸ್ಯತ್ವ ಶುಲ್ಕ ಪಾವತಿಸುವ ಮೂಲಕ ಆನಂದಿಸಬಹುದು. ಇಲ್ಲಿ ನಡೆಯುವ ಸಣ್ಣ ವಿಹಾರ ನೌಕೆಯ ಒಂದು ಹಬ್ಬವು ಇಂಗ್ಲೆಂಡಿನಲ್ಲಿ ನಡೆಯುವ ಯಾಟಿಂಗ್ ಹಬ್ಬವನ್ನೆ ಹೋಲುವಂತಿದ್ದು, ಇದು ಜೂನ್ ತಿಂಗಳಿನಲ್ಲಿ ಆಯೋಜಿಸಲ್ಪಡುತ್ತದೆ.


Click it and Unblock the Notifications