ಗೌನೊ ಬೆಟ್ಟಗಳು ನೈನಿತಾಲ್ ನ ಪಾನ್ಗೊಟ್ ಹಳ್ಳಿಯಲ್ಲಿರುವ ರಮಣೀಯ ಪರ್ವತ ಸೌಂದರ್ಯವನ್ನು ಉಲ್ಲೇಖಿಸುತ್ತವೆ. ವಾಕಿಂಗ್ ಟ್ರಯಲ್ (ಕಾಲುದಾರಿ) ಮೂಲಕ ಬೆಟ್ಟಗಳನ್ನು ಪ್ರವೇಶಿಸಬೇಕಾದರೂ ಇಲ್ಲಿನ ಓಕ್, ದೇವದಾರು ಮತ್ತು ಬಿದಿರಿನ ದಟ್ಟ ಕಾಡುಗಳ ಮೂಲಕ ಮುಂದುವರಿಯಬಹುದು. ಈ ಮೂಲಕ ಸಂಚರಿಸುವಾಗ ಅಳಿವಿನಂಚಿನಲ್ಲಿರುವ ಸಸ್ಯಗಳ ಜೊತೆಗೆ, ಕಪ್ಪು ಹರಟೆಮಲ್ಲ ಪಕ್ಷಿಗಳು ಮತ್ತು ಬೂದು ಮರಕುಟಿಗಗಳನ್ನು ವೀಕ್ಷಿಸಬಹುದಾಗಿರುವುದೂ ಅಲ್ಲದೆ ಇನ್ನೂ ಅನೇಕ ಅಪರೂಪದ ಪಕ್ಷಿ ಜಾತಿಗಳನ್ನು ಇಲ್ಲಿ ಕಾಣಬಹುದು. ಪ್ರಕೃತಿ ಪ್ರಿಯರಿಗೆ ಉತ್ತಮ ಸೌಂದರ್ಯ ಸವಿಯುವುದರ ಜೊತೆಗೆ ವನ್ಯಜೀವಿ ಛಾಯಾಗ್ರಹಣ ಕೂಡಾ ಮಾಡಬಹುದು.


Click it and Unblock the Notifications