Search
  • Follow NativePlanet
Share
ಮುಖಪುಟ » ಸ್ಥಳಗಳು » ನಹಾನ್ » ಆಕರ್ಷಣೆಗಳು » ಸುಕೇತಿ ಪಳೆಯುಳಿಕೆ ಉದ್ಯಾನ

ಸುಕೇತಿ ಪಳೆಯುಳಿಕೆ ಉದ್ಯಾನ, ನಹಾನ್

1

ಸುಕೇತಿ ಪಳೆಯುಳಿಕೆ ಉದ್ಯಾನವು ಹಿಮಾಚಲ ಪ್ರದೇಶದ ನಹಾನ್‌ನಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಪ್ರವಾಸಿಗರು ಸುಲಭವಾಗಿ ಈ ಪಾರ್ಕ್‌‌ಗೆ ತಲುಪಬಹುದು. ನಹಾನ್‌ನಿಂದ ಕೇವಲ 25 ಕಿ.ಮೀ ದೂರದಲ್ಲಿದೆ. ಪಾರ್ಕ್‌ನ್ನು ಹಿಮಾಚಲ ಪ್ರದೇಶ ರಾಜ್ಯ ಸರ್ಕಾರ ಮತ್ತು ಭಾರತೀಯ ಪುರಾತತ್ವ ಇಲಾಖೆಯಿಂದ ನಿರ್ಮಿಸಲ್ಪಟ್ಟಿದೆ. ನಿರ್ಮಾಣದ ನಂತರ ತುಂಬಾ ಕಾಳಜಿಯಿಂದ ನಿರ್ವಹಿಸುತ್ತಿದ್ದಾರೆ. ಏಷ್ಯಾದಲ್ಲೇ ಇದು ಮೊದಲ ಪಳೆಯುಳಿಕೆ ಪಾರ್ಕ್‌ ಆಗಿದೆ. ತಮ್ಮ ಸಂಶೋಧನಾ ಕೆಲಸಗಳಿಗಾಗಿ ಅಪಾರ ಪ್ರಮಾಣದ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಪುರಾತನ ಪ್ರಾಣಿಗಳ ಪ್ರತಿಕೃತಿಗಳನ್ನು ಎಫ್‌ಆರ್‌ಪಿಯಿಂದ ಮಾಡಲಾಗಿದ್ದು ಪಾರ್ಕ್‌‌ನಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಮಾರ್ಕಂಡ ನದಿಯ ದಡದಲ್ಲಿರುವ ಈ ಪಾರ್ಕ್‌ನಲ್ಲಿ ಸ್ಟೆಗೋಡೋನ್‌ ಗಣೇಶ, ಸಿವತೇರಿಯಮ್‌, ಕೊಲೊಶೆಲಿಸ್‌ ನಕ್ಷಾಂಶ; ಪರಮಶೆರ್ಡಸ್‌, ಹೆಕ್ಸಾಪ್ರೊಟೋಡೋನ್‌-ಸಿವಲೆನ್ಸಿಸ್‌ ಮತ್ತು ಕ್ರೊಕೊಡಿಲಿಯಾಗಳ ಪ್ರತಿಕೃತಿಗಳಿವೆ.

ಈ ಎಲ್ಲಾ ಪಳೆಯುಳಿಕೆಗಳು ಮತ್ತು ಅಸ್ತಿಪಂಜರಗಳು ಪುರಾತತ್ವಶಾಸ್ತ್ರಜ್ಞರ ನಿರ್ವಹಣೆಗೆ ಒಳಪಟ್ಟಿದೆ. ಪೂರ್ವ ಐತಿಹಾಸಿಕ ಕಾಲದ ಈ ಅಮೂಲ್ಯ ಪಳೆಯುಳಿಕೆಗಳನ್ನು ನಾಜೂಕಿನಿಂದ ಕಾಪಾಡಿಕೊಂಡು ಬರಲಾಗಿದೆ. ಮಧ್ಯ ಮತ್ತು ಮೇಲಿನ ಶಿವಾಲಿಕ್‌ನಲ್ಲಿ ಇದೆ. ಇಲ್ಲಿ ಮೃದು ಮರಳುಗಲ್ಲು ಮತ್ತು ಜೇಡಿಮಣ್ಣು ಯಥೇಚ್ಛವಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu