ಚಾಮುಂಡಿ ಬೆಟ್ಟದ ಮೇಲೆ ನೆಲೆಸಿರುವ ಲಲಿತ ಮಹಾಲ್ ಪ್ರವಾಸಿಗರು ಒಮ್ಮೆ ಯಾದರೂ ನೋಡಲೆಬೇಕಾದ ಸುಂದರವಾದ ಪಾರಂಪರಿಕ ಕಟ್ಟಡ. ಈ ಮಹಲನ್ನು ನಾಲ್ವಡಿ ಕೃಷ್ಣ ರಾಜ ರಾಜ ಒಡೆಯರವರು 1921ರಲ್ಲಿ ಭಾರತದ ವೈಸರಾಯ್ ರವರಿಗಾಗಿ ನಿರ್ಮಿಸಿದರು. ಮುಂಬೈನ ಈ ಡಬಲ್ಯು. ಫ್ರೀಚ್ಲೀರವರು ನವೀನ ವಾಸ್ತುಶೈಲಿಯ ಜೊತೆಗೆ ಆಂಗ್ಲರ ಮನೆಗಳ ಮತ್ತು ಇಟಾಲಿಯನ್ ಪ್ಲಾಜಾಗಳ ಮಾದರಿಯಲ್ಲಿ ವಿನ್ಯಾಸ ಮಾಡಿದರು. ಪ್ರಸ್ತುತವಾಗಿ ಈ ಬಂಗಲೆಯು ಭಾರತೀಯ ಪ್ರವಾಸೋಧ್ಯಮ ಅಭೀವೃದ್ಧಿ ಇಲಾಖೆಯ ಯೋಜನೆಯಂತೆ ಪಂಚತಾರಾ ಹೊಟೇಲ್ ಆಗಿ ಮಾರ್ಪಾಡಾಗಿದೆ. ಈ ವೈಭವಯುತ ಹೊಟೇಲ್ ತನ್ನ ಅತಿಥಿಗಳಿಗೆ ಮೂಲ ಬಂಗಲೆಯ ಸಮಾನಕ್ಕೆ ತಕ್ಕಂತೆ ಉನ್ನತ ಮಟ್ಟದ ಆತಿಥ್ಯದೊಂದಿಗೆ ಸೇವೆ ನೀಡುತ್ತದೆ.ಈ ಬಂಗಲೆಯು ಹೊಟೇಲ್ ಆಗಿ ಬದಲಾಗಿದ್ದರೂ ಮೂಲಸ್ಥಳವನ್ನು ಹಾಗೆ ಸಂರಕ್ಷಿಸಲಾಗಿದೆ. ವೈಸರಾಯ್ ಕೊಠಡಿಯಿಂದ ಮತ್ತು ಭೋಜನಾ ಗೃಹದಿಂದ ಇಟಾಲಿಯನ್ ಅಮೃತಶಿಲೆಯ ಮೆಟ್ಟಿಲಿನವರೆಗೂ ಎಲ್ಲವನ್ನೂ ಅದ್ಭುತವಾಗಿ ನೋಡಿಕೊಳ್ಳಲಾಗಿದೆ. ಪ್ರಸ್ತುತವಾಗಿ ನೃತ್ಯ ಹಾಗೂ ಭೋಜನಾ ಕೊಠಡಿಗಳನ್ನು ನೃತ್ಯ ಮತ್ತು ಸಭೆಗಳ ಕೊಠಡಿಯಂತೆ ಬಳಸಲಾಗುತ್ತಿದೆ. ಪ್ರಾಚೀನ ಚಿತ್ರ ಕಲಾಕೃತಿ ಮತ್ತು ಪೀಠೋಪಕರಣಗಳಲ್ಲದೆ ಇತರೆ ಅನುಕೂಲಕರ ಸೌಲಭ್ಯಗಳನ್ನು ಅತಿಥಿಗಳ ಹಿತಕ್ಕಾಗಿ ಹೊಟೇಲ್ ಉನ್ನತಿಗೊಳಿಸಿದೆ. ಪ್ರವಾಸಿಗರು ಟೀ ಮತ್ತು ಕಾಕ್ ಟೈಲ್ ಪಾರ್ಟಿಗಳನ್ನು ಸುಂದರವಾದ ಚಿಲುಮೆಗಳು ಮತ್ತು ಸಾಕಷ್ಟು ನಿಲ್ದಾಣ ಜಾಗವಿರುವ ಹುಲ್ಲು ಹಾಸಿನ ಬಳಿ ಆನಂದಿಸಬಹುದು.


Click it and Unblock the Notifications