ಮಸ್ಸೂರಿಯಲ್ಲಿರುವ ಕಣಿವೆಗಳಲ್ಲಿಯ ಚಾರಣ ಒಂದು ಅತ್ಯಂತ ಪ್ರಿಯವಾದ ಚಟುವಟಿಕೆ ಆಗಿದೆ. ಇಲ್ಲಿರುವ ಹಲವಾರು ಬೆಟ್ಟಗಳು ಚಾರಣ ಪ್ರಿಯರನ್ನು ಕೈಬೀಸಿ ಕರೆಯುತ್ತವೆ. ಅಗ್ಲಾರ್, ಪಾರ್ಕ್ ಎಸ್ಟೇಟ್, ಭದ್ರಾಜ್ ಅರಣ್ಯ, ಲಾಲ್ ಟಿಬ್ಬಾ ಮತ್ತು ನಾಗ್ ಟಿಬ್ಬಾ ಕೆಲವು ಪ್ರಖ್ಯಾತ ಚಾರಣ ತಾಣಗಳಾಗಿವೆ. ಹಿಮಾಲಯ ಅಡ್ವೆಂಚರ್ ಸಂಸ್ಥೆ ಚಾರಣದ ಜೊತೆಗೆ ನದಿ ದಾಟುವುದು, ಬೆಟ್ಟ ಹತ್ತುವುದು ಮತ್ತು ನೇಚರ್ ಕ್ಯಾಂಪ್ ಗಳನ್ನ ಇಲ್ಲಿ ಆಯೋಜಿಸುತ್ತದೆ. ಇದರ ಜೊತೆಗೆ ತಮ್ಮ ಚಾರಣ ದಾರಿಯಲ್ಲಿ ಬರುವ ಮನೆಗಳು ಮತ್ತು ಪ್ರವಾಸಿ ಬಂಗ್ಲೋ ಗಳಲ್ಲಿ ವಸತಿ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಆದರೆ ರಂಗನ್ ಗಾವ್ ನಲ್ಲಿ ಚಾರಣ ಮಾಡದಿರುವುದು ಒಳಿತು ಏಕೆಂದರೆ ಇದನ್ನು ಅಪಾಯಕಾರಿ ವಲಯ ಎಂದು ಗುರುತಿಸಲಾಗುತ್ತದೆ.


Click it and Unblock the Notifications