ಮುನ್ಸಿಪಲ್ ಗಾರ್ಡನ್ ಹ್ಯಾಪಿ ಕಣಿವೆಯಲ್ಲಿರುವ ಒಂದು ಅತ್ಯಂತ ಸುಂದರವಾದ ಉದ್ಯಾನವನವಾಗಿದೆ. ಕಂಪನಿ ಬಾಗ್ ಎಂದು ಕರೆಯಲಾಗುವ ಈ ಸ್ಥಳವನ್ನು ಉದ್ಯಾನವನ ಅಭಿವೃದ್ಧಿ ಸಂಘ ನೋಡಿಕೊಳ್ಳುತ್ತದೆ. ಇದು ಲೈಬ್ರರಿ ಪಾಯಿಂಟ್ ನಿಂದ ಸುಮಾರು 3 ಕಿ.ಮೀ ದೂರದಲ್ಲಿದ್ದು ಲಾಲ್ ಬಹದ್ದೂರ್ ರಾಷ್ಟ್ರೀಯ ಆಡಳಿತ ಅಕಾಡೆಮಿಯಿಂದ ಬಹಳ ಸಮೀಪದಲ್ಲಿದೆ. ಇಲ್ಲಿರುವ ಹಲವಾರು ತಳಿಯ ಹೂವುಗಳು ಮತ್ತು ಹಕ್ಕಿಗಳಿಂದಾಗಿ ಪ್ರಕೃತಿ ಪ್ರಿಯರಿಗೆ ಇದು ಅತ್ಯಂತ ಇಷ್ಟವಾದ ಸ್ಥಳವಾಗಿದೆ. ಇಲ್ಲಿರುವ ಉದ್ಯಾನದಲ್ಲಿ ಸುಮಾರು 800 ಬಗೆಯ ಹೂವುಗಳಿವೆ. ಜೊತೆಗೆ ಇಲ್ಲೇ ಇರುವ ನರ್ಸರಿಯಲ್ಲಿ ನಿಮಗಿಷ್ಟವಾದ ಸಸ್ಯವನ್ನು ನೀವು ಖರೀದಿಸಲೂಬಹುದು. ಪುಟೋನಿಯಾ, ದಹಿಲಾಸ್, ಪನ್ಸಿ, ಬೆಗೋನಿಯಾ ಇಲ್ಲಿರುವ ಪ್ರಮುಖವಾದ ಸಸ್ಯಗಳಾಗಿವೆ. ಇದರ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಚೀನಾದ ಮರಗಳನ್ನೂ ಇಲ್ಲಿ ಕಾಣಬಹುದಾಗಿದೆ.
ಉದ್ಯಾನವನದಲ್ಲಿ ಇತ್ತೀಚೆಗಷ್ಟೆ ಅಭಿವೃದ್ಧಿಪಡಿಸಲಾದ ಕೃತಕ ಕೆರೆಯಲ್ಲಿ ಬೋಟಿಂಗ್ ಮಾಡುವ ಅನುಭವವನ್ನೂ ಪ್ರವಾಸಿಗರು ಪಡೆಯಬಹುದಾಗಿದೆ. ಬರಿ ಸರೋವರವಲ್ಲದೇ ಕಾರಂಜಿ ಮತ್ತು ವಿಸ್ತಾರಕ್ಕೆ ಹರಡಿರುವ ಹುಲ್ಲುಹಾಸಿನ ಮೇಲೆ ನಡೆದಾಡುವ ಸುಖವನ್ನೂ ಇಲ್ಲಿ ಪಡೆಯಬಹುದು. ಪ್ರವಾಸಿಗರು ಇಲ್ಲಿ ಕಾರನ್ನು ಬಾಡಿಗೆ ತೆಗೆದುಕೊಳ್ಳುವುದರ ಮೂಲಕ, ರಿಕ್ಷಾ ಮತ್ತು ಸೈಕಲ್ ಮೇಲೆಯೂ ತಲುಪಬಹುದಾಗಿದೆ.


Click it and Unblock the Notifications