Search
  • Follow NativePlanet
Share
ಮುಖಪುಟ » ಸ್ಥಳಗಳು » ಮುನ್ನಾರ್ » ಆಕರ್ಷಣೆಗಳು » ಎಕೋ ಪಾಯಿಂಟ್

ಎಕೋ ಪಾಯಿಂಟ್, ಮುನ್ನಾರ್

7

 ಎಕೋ ಪಾಯಿಂಟ್ ಮುನ್ನಾರ್ ನಗರದಿಂದ 13 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಸ್ಥಳವು ಯುವಕರ ನೆಚ್ಚಿನ ತಾಣವಾಗಿದೆ. ಹಲವಾರು ಗಿರಿಧಾಮಗಳು ಎಕೋ ಪಾಯಿಂಟನ್ನು ಹೊಂದಿರುತ್ತವೆ. ಮುನ್ನಾರಿನ ಎಕೋ ಪಾಯಿಂಟಿನ ವಿಶೇಷವೆಂದರೆ ಇದು ಒಂದು ನಯನ ಮನೋಹರವಾದ ನದಿ ತೀರದಲ್ಲಿ ನೆಲೆಸಿದೆ. ಈ ಎಕೋ ಪಾಯಿಂಟಿನಲ್ಲಿ ವೀಕ್ಷಕರು ತಮ್ಮ ಧ್ವನಿ ಜಲಾಶಯದಿಂದ ಪ್ರತಿಧ್ವನಿಯಾಗಿ ವಾಪಸ್ಸಾಗುವುದನ್ನು ಕೇಳಬಹುದು.

ಹಿಮಾಚ್ಛಾಧಿತ ಗಿರಿ ಶೃಂಗಗಳು ಮತ್ತು ಕೆರೆಗಳು ಎಕೋ ಪಾಯಿಂಟನ್ನು ಪ್ರಸಿದ್ಧವಾದ ವಿಹಾರ ತಾಣವನ್ನಾಗಿ ಮಾಡಿವೆ. ಕೆರೆಯ ದಂಡೆಗಳು ಪರಿಸರದ ನಡಿಗೆ ಮತ್ತು ಸುಮ್ಮನೆ ಹವಾ ಸೇವನೆಗೆಂದು ನಡೆದಾಡಲು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿಗೆ ಸಮೀಪದ ಟೀ ತೋಟಗಳು ಮತ್ತು ಮಸಾಲೆ ತೋಟಗಳು ಚಾರಣಿಗರನ್ನು ಮತ್ತು ವೀಕ್ಷಕರನ್ನು ಪ್ರಕೃತಿಯ ಅದ್ಭುತವನ್ನು ತೋರಿಸಲು ಕೈಬೀಸಿ ಕರೆಯುತ್ತಿವೆ.

ತನ್ನ ಹಚ್ಚ ಹಸಿರಿನಿಂದ ಕೂಡಿದ ವನಸಿರಿ ಮತ್ತು ವಿವಿಧ ಹೊರಾಂಗಣ ಚಟುವಟಿಕೆಗಳಿಗೆ ಅವಕಾಶವನ್ನು ಒದಗಿಸುವ ಸ್ಥಳವಾಗಿರುವುದರಿಂದಾಗಿ ಎಕೋ ಪಾಯಿಂಟ್ ಒಂದು ಸಾಹಸ ಚಟುವಟಿಕೆಯ ತಾಣವಾಗಿ ಪರಿಣಮಿಸಿದೆ. ಛಾಯಾಗ್ರಹಣದ ಆಸಕ್ತರಿಗೆ ಈ ಸ್ಥಳವು ನಿಜಕ್ಕು ಅತ್ಯದ್ಭುತ ತಾಣವಾಗಿದೆ.

 

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat