ವಿ.ಟಿ ನಿಲ್ದಾಣ ಛತ್ರಪತಿ ಶಿವಾಜಿ ನಿಲ್ದಾಣ ಎಂದು ಕರೆಸಿಕೊಳ್ಳುವುದು ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಮುಂಬೈನ ಪ್ರಮುಖ ವಾಣಿಜ್ಯ ಕೇಂದ್ರವು ಕೂಡಾ ಆಗಿದೆ. ನಗರದ ಯುವ ಗುಂಪಿನ ಕಾರಣದಿಂದ, ಅನೇಕ ಮೂಲಭೂತ ವಸ್ತುಗಳೆನಿಸಿದ ಗ್ರಾಹಕ ವಿದ್ಯುನ್ಮಾನಗಳು, ಕಂಪ್ಯೂಟರ್ ಮಾರುಕಟ್ಟೆ, ಹಾಗೂ ಬಟ್ಟೆಗಳು ರಸ್ತೆಯ ಬದಿ ಹಾಗೂ ರಸ್ತೆಬದಿಯ ಸುರಂಗದುದ್ದಕ್ಕೂ ಮಾರಾಟ ಮಾಡಲಾಗುತ್ತದೆ. ದಕ್ಷಿಣ ಮುಂಬೈ ಮೂಲದ ಪ್ರವಾಸಿಗರು ವಿಶ್ರಾಂತಿ ಪಡೆಯಲು ಬಯಸಿದರೆ ಹತ್ತಿರದಲ್ಲಿಯೇ ಹೋಟೆಲ್ ವ್ಯವಸ್ಥೆ, ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ಪುಸ್ತಕ ಮಾರಾಟ, 17 ನೇ ಶತಮಾನಕ್ಕೂ ಹಿಂದಿನ ಅಂಚೆ ಹಾಗೂ ನಾಣ್ಯಗಳೂ ಇಲ್ಲಿ ದೊರೆಯುತ್ತವೆ!


Click it and Unblock the Notifications