ಸಾಂಪ್ರದಾಯಿಕ ಚರ್ಚ್, ಬೆಸಿಲ್ಲಾ ಆಫ್ ಅವರ್ ಲೇಡಿ ಆಫ್ ದ ಮೌಂಟ್’, ಮೌಂಟ್ ಮೇರಿ ಚರ್ಚ್ ಎಂದೇ ಕರೆಯಲ್ವಡುತ್ತಿದ್ದು, ಸಮುದ್ರ ಮಟ್ಟದಿಂದ 80 ಅಡಿ ಎತ್ತರದಲ್ಲಿದೆ. ಇದಕ್ಕೆ ಭೇಟಿ ನೀಡುವ ಪ್ರವಾಸಿಗರು, ಇಲ್ಲಿಂದ ಅರೇಬಿಯನ್ ಸಮುದ್ರದ ಭವ್ಯವಾದ ದೃಶ್ಯಾವಳಿಗಳನ್ನು ನೋಡಬಹುದು. ಅಲ್ಲದೆ ಸೆಪ್ಟಂಬರ್ ತಿಂಗಳಿನಲ್ಲಿ ಮೇರಿ ನೆನಪಿಗಾಗಿ ಆಚರಿಸಲಾಗುವ ಉತ್ಸವದಲ್ಲಿಯೂ ಕೂಡಾ ನೀವು ಭಾಗವಹಿಸಬಹುದು. ಮುಂಬಯಿಯ ಒಂದು ಪಾಶ್ ಎನ್ನಬಹುದಾದ ಸ್ಥಳದಲ್ಲಿದ್ದು ಬ್ಯಾಂಡ್ ಸ್ಟಾಂಡ್ ಹಾಗೂ ಕಾರ್ಟರ್ ರಸ್ತೆಗೂ ಹತ್ತಿರವಾಗಿರುವ ಈ ಚರ್ಚ್ ಖಂಡಿತ ಭೇಟಿ ನೀಡಬೇಕಾದ ಸ್ಥಳ. ಇದು ವಿಶಾಲವಾಗಿದ್ದು ಇಲ್ಲಿನ ಶಿಲ್ಪಕಲೆ ಮತ್ತು ಸೂಕ್ಷ್ಮ ಕೆತ್ತನೆಗಳು ಆಕರ್ಷಣೆಯ ಕೇಂದ್ರ ಬಿಂದು.


Click it and Unblock the Notifications