ನೀವು ಹಾಜಿ ಅಲಿ ಮಸೀದಿಗೆ ಭೇಟಿ ನೀಡಿದರೆ ಅದರ ಹೊರಗಡೆ ಬಲಭಾಗದಲ್ಲಿ ಸ್ವಲ್ವ ದೂರದಲ್ಲಿರುವ ಪಾನೀಯಗಳ ಕೇಂದ್ರಕ್ಕೆ ಭೇಟಿ ನೀಡದೆ ಹಿಂತಿರುಗಲು ಸಾಧ್ಯವಿಲ್ಲ. ಈ ಪಾನೀಯ ಕೇಂದ್ರವು ಸರಾಸರಿ ಪಾದಚಾರಿಗಳಿಗೆ, ಮಸೀದಿಗೆ ಬರುವ ಯಾತ್ರಾರ್ಥಿಗಳಿಗೆ ಎಲ್ಲರಿಗೂ ಅತ್ಯಂತ ಇಷ್ಟವಾಗುವಂತದ್ದು. ಹಾಜಿ ಅಲಿ ಪಾನೀಯ ಕೇಂದ್ರವು ವಿಶೇಷವಾದ ಕೆಲವು ಅನನ್ಯ ಔಷಧೀಯ ಗುಣವನ್ನು ಹೊಂದಿರುವ ಮಿಶ್ರಣ ಪಾನೀಯಗಳನ್ನು ಹೊರತುಪಡಿಸಿ ಸಾಂಪ್ರದಾಯಿಕ ತಾಜಾ ಹಣ್ಣಿನ ರಸಗಳನ್ನೂ ಕೊಡುತ್ತವೆ.


Click it and Unblock the Notifications