ಸುಮಾರು ಎಂಟಕ್ಕಿಂತ ಹೆಚ್ಚು ಕಥೆಗಳನ್ನು ತನ್ನ ಸುತ್ತ ಹೊಂದಿರುವ, ಮುಂಬೈನಲ್ಲಿರುವ ಭಾರತದ ಗೇಟ್ವೆ, ಅದ್ಭುತ ವಾಸ್ತುಶಿಲ್ಪವನ್ನು ಹೊಂದಿದೆ. ಹಿಂದೂ ಹಾಗೂ ಮುಸ್ಲಿಂ, ಈ ಎರಡೂ ಧರ್ಮಗಳ ವಾಸ್ತುಶಿಲ್ಪ ಶೈಲಿಯನ್ನೂ ಗಮನದಲ್ಲಿಟ್ಟುಕೊಂಡು ನಿರ್ಮಿಸಲಾದ ಈ ಗೇಟ್ವೆ, 1911 ರಲ್ಲಿ ಭಾರತಕ್ಕೆ ಬಂದ ರಾಜರ ನೆನಪಿಗಾಗಿ ಕಟ್ಟಲಾಗಿದೆ. ಮುಂಬೈಗೆ ಪ್ರವಾಸಕ್ಕೆ ಬಂದರೆ, ಇಲ್ಲಿಗೆ ಭೇಟಿ ನೀಡಿ ನಿಮ್ಮ ಒಂದಿಷ್ಟು ಸಮಯವನ್ನು ಇಲ್ಲಿ ಕಳೆಯದಿದ್ದರೆ ನಿಮ್ಮ ಮುಂಬೈ ಪ್ರಯಾಣ ಅಪೂರ್ಣವಾದಂತೆಯೇ ಸರಿ! ಕೊಲಾಬಾ ಮಾರುಕಟ್ಟೆ, ಬಡೆ ಮಿಯಾಸ್, ಮೊಂಡೆಗರ್ ಹಾಗು ಪ್ರಸಿದ್ಧ ಲಿಯೋಪೋರ್ಡ್ ಕೆಫೆಯಂತಹ ಸ್ವರ್ಗದಂತಿರುವ ದಕ್ಷಿಣ ಮುಂಬೈನ ಕೆಲವು ಪ್ರಮುಖ ಹೋಟೆಲ್ ಗಳು ಭಾರತದ ಗೇಟ್ವೆಗೆ ಅತ್ಯಂತ ಹತ್ತಿರದಲ್ಲಿವೆ.


Click it and Unblock the Notifications