ಬ್ರ್ಯಾಂಡೆಡ್ ವಸ್ತುಗಳ ಖರೀದಿಯ ನಂತರ ಇದೀಗ ಬಾಂದ್ರಾ ಬೀದಿಯಲ್ಲಿ ಖರೀದಿಸುವ ಸಮಯ! ಈ ಹಿಂದಿನ ದಿನಗಳಲ್ಲಿ ಮುಂಬೈ ನಗರದಲ್ಲಿ ರಸ್ತೆ ಬದಿಯಲ್ಲಿ ಕೊಂಡ ವಸ್ತುಗಳು ಆರು ತಿಂಗಳುಗಳ ಕಾಲ ಕೂಡ ಬಾಳಿಕೆ ಬರುವುದಿಲ್ಲ ಎಂಬ ಮಾತಿತ್ತು. ಆದರೆ ಈಗ ಈ ಬೀದಿ ಮಾರಾಟಗಾರರು ಸ್ವತಃ ತಾವೇ ಸವಾಲುಗಳನ್ನು ಸ್ವೀಕರಿಸಿದಂತೆ ಚಿಲ್ಲರೆ ಅಂಗಡಿಗಳಿಗೆ ಪ್ರತಿಸ್ವರ್ಧಿಯಾಗಿ ನಿಂತಿದ್ದಾರೆ. ಆದ್ದರಿಂದ ಇಲ್ಲಿ ದೊರೆಯುವ ಅಗ್ಗದ ಬೆಲೆಯ ಚಪ್ಪಲಿ, ಟೀ- ಶರ್ಟ್ ಗಳು, ಪುರುಷ ಹಾಗೂ ಮಹಿಳೆಯರಿಗೆ ಬೇಕಾದ ವಸ್ತುಗಳು, ಅಲ್ಲದೆ ಕಡಿಮೆ ಬೆಲೆಗೆ ವಿದ್ಯುನ್ಮಾನ ವಸ್ತುಗಳನ್ನೂ ಕೂಡಾ ಇಲ್ಲಿ ಕೊಂಡುಕೊಳ್ಳಬಹುದು. ಬಾಂದ್ರಾದಲ್ಲಿ ಖರೀದಿ ಮಾಡಲು ಎರಡು ಪ್ರಮುಖ ಸ್ಥಳಗಳೆಂದರೆ ಲಿಂಕಿಂಗ್ ರಸ್ತೆ ಹಾಗೂ ಹಿಲ್ ರಸ್ತೆ.


Click it and Unblock the Notifications