Search
  • Follow NativePlanet
Share
ಮುಖಪುಟ » ಸ್ಥಳಗಳು » ಮುದುಮಲೈ » ಆಕರ್ಷಣೆಗಳು » ತೆಪ್ಪಕಾಡು ಆನೆ ಶಿಬಿರ

ತೆಪ್ಪಕಾಡು ಆನೆ ಶಿಬಿರ, ಮುದುಮಲೈ

2

ತೆಪ್ಪಕಾಡು ಆನೆ ಶಿಬಿರವು 1972ರಲ್ಲಿ ಪ್ರಾರಂಭಗೊಂಡಿತು. ಇಲ್ಲಿ ನಿರ್ಬಂಧಿತ ಪ್ರದೇಶದ ಒಳಗೆ ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿಯ ಜೊತೆ ಒಡನಾಡುವ ಅವಕಾಶವಿದೆ. ಇಲ್ಲಿನ ಆನೆಗಳನ್ನು ಅತ್ಯುತ್ತಮವಾಗಿ ಪಳಗಿಸಲಾಗಿದೆ. ಪ್ರಸ್ತುತ್ತ ತೆಪ್ಪಕಾಡು ಶಿಬಿರದಲ್ಲಿ ಒಟ್ಟು 23 ಆನೆಗಳು ಇವೆ. ಈ ಶಿಬಿರವೆ ಅವುಗಳ ಮನೆ. ಪ್ರತಿದಿನ ಎರಡು ಆನೆಗಳು ಈ ಶಿಬಿರದ ಸಂಕೀರ್ಣದಲ್ಲಿರುವ ಗಣಪತಿಗೆ ಪೂಜೆಯನ್ನು ಮಾಡುತ್ತವೆ.

ಈ ಶಿಬಿರದಲ್ಲಿ ಬೆಳಗ್ಗೆ ಮತ್ತು ಸಂಜೆ ಆನೆ ಸವಾರಿ ಮಾಡುವ ಅವಕಾಶವಿದೆ. ಸಂಜೆಯ ಹೊತ್ತು ಪ್ರತಿದಿನ ಆನೆಗಳಿಗೆ ಊಟವನ್ನು ಒದಗಿಸುವ ಕಾರ್ಯ ಸಾಗುತ್ತದೆ. ಪ್ರವಾಸಿಗರು ಸಹ ಇದನ್ನು ನೋಡಬಹುದು. ಈ ಶಿಬಿರವನ್ನು ನೋಡಲು ಪ್ರತಿ ವರ್ಷ ಬರುವ ಪ್ರವಾಸಿಗರ ಸಂಖ್ಯೆ ಲಕ್ಷ ದಾಟುತ್ತಿದೆ. ಅಲ್ಲದೆ ಈ ಶಿಬಿರವು ಆನೆಗಳ ಕುರಿತಾಗಿ ಮಾಹಿತಿಯನ್ನು ನೀಡುವ ಶೈಕ್ಷಣಿಕ ತಾಣವಾಗಿ ಸಹ ಗುರುತಿಸಿಕೊಂಡಿದೆ. ಹಾಗಾಗಿ ತೆಪ್ಪಕಾಡು ಆನೆ ಶಿಬಿರವು ಜೈವಿಕ ಪ್ರವಾಸೋದ್ಯಮ, ಕಾಡಿನ ಮೇಲೆ ನಿಗಾ ಇಡುವುದು ಮತ್ತು ಆನೆ ಮತ್ತು ಮನುಷ್ಯರ ನಡುವಿನ ವೈಮನಸ್ಸುಗಳನ್ನು ನಿವಾರಿಸಲು ಹಾಗು ಆನೆಯ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡುತ್ತಿದೆ.

ಭೇಟಿಯ ಸಮಯ ; ಬೆಳಗ್ಗೆ 5.30 ರಿಂದ ಸಂಜೆ - 6.00 ಗಂಟೆಯವರೆಗೆಪ್ರವೇಶ ಶುಲ್ಕ ; 20 ರೂಪಾಯಿ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun