Search
  • Follow NativePlanet
Share
ಮುಖಪುಟ » ಸ್ಥಳಗಳು » ಮುದುಮಲೈ » ಆಕರ್ಷಣೆಗಳು » ಮೋಯರ್ ನದಿ

ಮೋಯರ್ ನದಿ, ಮುದುಮಲೈ

3

ಮೋಯರ್ ನದಿಯು ಭವಾನಿ ನದಿಯ ಒಂದು ಉಪನದಿ. ಇದು ಮಸಿನಗುಡಿ - ಊಟಿ ರಸ್ತೆಯಲ್ಲಿರುವ ಮೋಯರ್ ಪಟ್ಟಣದ ಬಳಿಯಲ್ಲಿ ಉಗಮವಾಗುತ್ತದೆ. ಇದು ಬಂಡಿಪುರ ಮತ್ತು ಮುದುಮಲೈ ವನ್ಯಜೀವಿಧಾಮದ ಪ್ರಾಕೃತಿಕ ಗಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಧಾಮದ ಹಲವಾರು ಪ್ರಾಣಿಗಳು ಈ ನದಿಗೆ ನೀರು ಕುಡಿಯುವ ಸಲುವಾಗಿ ಆಗಮಿಸುತ್ತಿರುತ್ತವೆ. ಆಗಾಗಿ ಪ್ರಾಣಿಗಳನ್ನು ನೋಡಲು ಈ ನದಿಯ ಕಿನಾರೆಗಳು ಅತ್ಯಂತ ಸೂಕ್ತ ಸ್ಥಳವಾಗಿದೆ. ಮುದುಮಲೈ ಕಮರಿ ಅಥವಾ ಮುದುಮಲೈ ಕ್ಯಾನ್ಯನ್ ಎಂಬುದು ಮೋಯರ್ ನದಿಯ ಹರಿವಿನಿಂದ ಉಂಟಾದ ಆಳವಾದ ಕಮರಿಯಾಗಿದೆ.

20 ಕಿ.ಮೀ ನಷ್ಟು ಆಳವಾದ ಈ ಕಮರಿಗೆ ಎತ್ತರದಿಂದ ಮೋಯರ್ ನದಿ ಧುಮುಕುವಾಗ ಮೋಯರ್ ಜಲಪಾತವುಂಟಾಗುತ್ತದೆ. ಈ ಜಲಪಾತವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಹಲವಾರು ಪ್ರವಾಸಿಗರು ಇಲ್ಲಿಗೆ ವಿಹಾರಕ್ಕೆಂದು ಬರುತ್ತಾರೆ. ಮುದುಮಲೈ ರಾಷ್ಟ್ರೀಯ ಉದ್ಯಾನವನಕ್ಕೆ ಈ ನದಿಯು ನೀರಿನ ಮೂಲವನ್ನು ಒದಗಿಸುತ್ತದೆ. ಪ್ರಶಾಂತವಾದ ಪರಿಸರದಲ್ಲಿ ಪ್ರಕೃತಿಯ ಅನುಭವವನ್ನು ಪಡೆಯಲು ಬಯಸುವವರಿಗಾಗಿ ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu