ಆನೆಗಳಿಗೆ ಆಹಾರ ನೀಡುವ ಶಿಬಿರದ ಬಳಿ ಒಂದು ವಸ್ತು ಸಂಗ್ರಹಾಲಯವಿದೆ. ಮುದುಮಲೈ ಕಾಡಿನಲ್ಲಿ ಹಿಂದೆ ಓಡಾಡಿಕೊಂಡು ಬಾಳ್ವೆ ಮಾಡಿದ್ದ ಪ್ರಾಣಿಗಳನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಇದೊಂದು ಭೇಟಿಕೊಡಲೆ ಬೇಕಾದ ಸ್ಥಳವಾಗಿದ್ದು, ಇಲ್ಲಿ ಪ್ರವಾಸಿಗರ ಕಾಡಿನಲ್ಲಿ ಹಿಂದೆ ರಾಜಾರೋಷವಾಗಿ ಬಾಳಿದ ಪ್ರಾಣಿಗಳ ಸಂರಕ್ಷಿತ ಮಾದರಿಗಳನ್ನು ನೋಡಬಹುದು. ಜೊತೆಗೆ ಅವುಗಳ ಈಗಿನ ಪರಿಸ್ಥಿತಿಯನ್ನು ತಾಳೆ ಮಾಡಬಹುದು.


Click it and Unblock the Notifications