ಮೌಂಟ್ ಅಬುವಿನ ನಕ್ಕಿ ಕೆರೆಯ ದಂಡೆಯ ಮೇಲೆ ಇರುವ ಶ್ರೀ ರಘುನಾಥ್ ಜೀ ದೇವಾಲಯವು ಒಂದು ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿದೆ. 14ನೇ ಶತಮಾನದಲ್ಲಿದ್ದ ಹಿಂದೂ ವಿದ್ವಾಂಸರಾದ ಶ್ರೀ ರಮಾನಂದರಿಂದ ನಿರ್ಮಾಣಗೊಂಡ ಈ ದೇವಾಲಯವನ್ನು ಭಗವಾನ್ ವಿಷ್ಣುವಿಗಾಗಿ ನಿರ್ಮಿಸಲಾಗಿದೆ. ವೈಷ್ಣವ ಪಂಥಕ್ಕೆ ಸೇರಿದ ಭಕ್ತಾಧಿಗಳು ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ.
ಈ ದೇವಾಲಯವು ಅತ್ಯಂತ ಸೊಗಸಾಗಿ ವಿನ್ಯಾಸಗೊಳಿಸಲಾದ ಭಿತ್ತಿ ಶಾಸನಗಳು ಮತ್ತು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ್ದು, ಮೇವಾಡದ ಸಂಸ್ಕೃತಿ ಮತ್ತು ಸಾಂಪ್ರದಾಯಿಕವಾದ ವಾಸ್ತುಶಿಲ್ಪಕ್ಕೆ ಒಂದು ಅದ್ಭುತವಾದ ಉದಾಹರಣೆಯಾಗಿ ನಿಂತಿದೆ. ಈ ದೇವಾಲಯದಲ್ಲಿ ಇರುವ ಅದ್ಭುತವಾದ ಶ್ರೀ ರಘುನಾಥ್ ಜೀ ಮೂರ್ತಿಯು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇದರ ಜೊತೆಗೆ ಇದು ಜಾತ್ರೆಯೋಪಾದಿಯಲ್ಲಿ ಭಕ್ತಾಧಿಗಳನ್ನು ಪ್ರತಿದಿನ ತನ್ನತ್ತ ಆಕರ್ಷಿಸುತ್ತಿರುತ್ತದೆ. ನಕ್ಕಿ ಕೆರೆಗೆ ಭೇಟಿ ಕೊಡುವ ಪ್ರವಾಸಿಗರು ವಾಸ್ತುಶಿಲ್ಪದ ಚಾತುರ್ಯವನ್ನು ನೋಡಲು ಶ್ರೀ ರಘುನಾಥ್ ಜೀ ದೇವಾಲಯಕ್ಕೆ ಭೇಟಿಕೊಡುತ್ತಿರುತ್ತಾರೆ.


Click it and Unblock the Notifications