ದಟ್ಡ ಸೀ ವರ್ಲ್ಡ್ ಮೌಂಟ್ ಅಬುವಿನ ದಿಲ್ವಾರ ದೇವಾಲಯದ ಕಡೆಗೆ ಸಾಗುವ ರಸ್ತೆಯಲ್ಲಿ ನೆಲೆಸಿದೆ. ಇದು ಭಾರತದ ಅತ್ಯಂತ ದೊಡ್ಡ ಅಕ್ವೇರಿಯಂ ಎಂದು ಪರಿಗಣಿಸಲ್ಪಟ್ಟಿದೆ. ಇದು ಮೀನುಗಳ ಮತ್ತು ಕಪ್ಪೆ ಚಿಪ್ಪುಗಳ ಬೃಹತ್ ಸಂಗ್ರಹವನ್ನು ಒಳಗೊಂಡಿದೆ. ದಟ್ಡ ಸೀ ವರ್ಲ್ಡ್ ಸಿಂಗಪೂರ್, ನೆದರ್ಲ್ಯಾಂಡ್ಸ್, ಯು ಎಸ್ ಎ,ಕೀನ್ಯಾ ಮುಂತಾದ ರಾಷ್ಟಗಳ ಮೀನುಗಳನ್ನು ಪ್ರದರ್ಶನಕ್ಕೆ ಇಟ್ಟಿದೆ. ಇಂದು ಇದು ಮೌಂಟ್ ಅಬುವಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆ ಎಂಬ ಕೀರ್ತಿಯನ್ನು ಮುಡಿಗೇರಿಸಿಕೊಂಡಿದೆ. ದಟ್ಡ ಸೀ ವರ್ಲ್ಡ್ ನಲ್ ಆವರಣದಲ್ಲಿ ಒಂದು ವಸ್ತು ಸಂಗ್ರಹಾಲಯ ಸಹ ಇದೆ. ಈ ವಸ್ತು ಸಂಗ್ರಹಾಲಯವು 10,000 ಕ್ಕೂ ಮೇಲ್ಪಟ್ಟ ವಿವಿಧ ಬಗೆಯ ,ಗಾತ್ರದ ಮತ್ತು ಆಕಾರದ ಕಪ್ಪೆಚಿಪ್ಪುಗಳ ಸಂಗ್ರಹವನ್ನು ಹೊಂದಿದೆ.


Click it and Unblock the Notifications