ಚಂಡೀಘಡದ ಶಿವಾಲಿಕ್ ಶ್ರೀಣಿಯ ಬುಡದಲ್ಲಿರುವ ಆಕರ್ಷಕ ತಾಣ ಸುಖನಾ ಕೊಳ. 1958 ರಲ್ಲಿ ಶಿವಾಲಿಕ್ ಬೆಟ್ಟದಿಂದ ಹರಿಯುವ ನೀರಿಗೆ ಆಣೆಕಟ್ಟು ಕಟ್ಟುವ ಮೂಲಕ 3 ಕಿ ಮೀ ಉದ್ದದ ಈ(ಕೊಳ) ಸರೋವರವನ್ನು ನಿರ್ಮಿಸಲಾಯಿತು. ಪ್ರಕೃತಿ ವೈಭವದಿಂದ ಕೂಡಿದ ಈ ಸರೋವರ ಪಾದಯಾತ್ರಿಗಳು, ಛಾಯಾಚಿತ್ರಗ್ರಾಹಕರು ಮತ್ತು ಪೇಂಟರ್ ಗಳನ್ನು ಆಕರ್ಷಿಸುತ್ತದೆ.
ಏಷ್ಯಾದ ದೋಣಿ ವಿಹಾರ ಚಾಂಪಿಯನ್ ಶಿಪ್ ನ ಮಾಜಿ ಸ್ಥಳವಾದ ಈ ಸರೋವರ ಏಷ್ಯಾ ಖಂಡದಲ್ಲೇ ದೋಣಿ ವಿಹಾರದ ಅತಿ ಉದ್ದ ಸರೋವರ ಎಂದು ಹೆಸರು ಪಡೆದಿದೆ. ಈ ಸ್ಥಳ ನೀರಿನ ಆಟಗಳಾದ ಸ್ಕೀಯಿಂಗ್, ಸ್ಪಾಟ್ ಸರ್ಫಿಂಗ್, ಸ್ಕಲ್ಲಿಂಗ್ ಮುಂತಾದವುಗಳಿಗೆ ಅನುಕೂಲಕರವಾಗಿದೆ. ಚಳಿಗಾಲದಲ್ಲಿ ಇಲ್ಲಿ ಬಂದು ಸೇರುವ ವಲಸೆಹಕ್ಕಿಗಳು ಪಕ್ಷಿ ವೀಕ್ಷಕರಿಗೆ ಆಕರ್ಷಣೀಯವಾಗಿದೆ. ಅದ್ಬುತವಾದ ವಾತಾವರಣವನ್ನು ಹೊಂದಿರುವ ಸುಖನಾ ಕೊಳ ಪಿಕ್ನಿಕ್, ಬೋಟಿಂಗ್ ಮತ್ತು ಧ್ಯಾನಕ್ಕೆ ಉತ್ತಮವಾದ ಸ್ಥಳ ಎನ್ನಬಹುದು.


Click it and Unblock the Notifications