ನಭಾ ಸಾಹಿಬ್ ಮೊಹಾಲಿ ಜಿಲ್ಲೆಯ ಪಟಿಯಾಲ - ಜಿರಾಕ್ಪುರ್ ಹೈವೇ ಯಲ್ಲಿರುವ ಒಂದು ಪೂಜ್ಯ ಸಿಖ್ ದೇವಾಲಯ. ಗುರು ತೇಜ್ ಬಹದ್ದೂರ್ ಜಿಯ ಮರಣದ ನಂತರ ಅವರ ಅಂತ್ಯ ಸಂಸ್ಕಾರ ಮಾಡಲಾದ ಅನಂದಪುರ್ ಸಾಹಿಬ್ ನಿಂದ ಭಾಯಿ ಜಿತಾ ಅವರು ಗುರುಗಳ ಅಸ್ಥಿಗಳನ್ನು ತೆಗೆದುಕೊಂಡು ಬಂದರು. ನಂತರ ಮುಸ್ಲಿಂ ಸಂತರಾದ ಹಾಗು ಗುರುಗಳ ಅನುಯಾಯಿಯೂಯಾಗಿದ್ದ ಫಕೀರ್ ದರ್ಗಾಹಿ ಷಾ ರ ಕೋರಿಕೆಯಿಂದಾಗಿ ಆ ಅಸ್ಥಿಗಳನ್ನು ಇಲ್ಲಿಯೆ ಇಟ್ಟರು. ಈ ಗುರುದ್ವಾರಕ್ಕೆ ಹೊಂದಿಕೊಂಡಂತೆ ಆ ಮುಸ್ಲಿಂ ಫ಼ಕೀರರ ಮಜ್ಹರ್ ಕೂಡ ಇಲ್ಲಿದೆ.
1688 ರಲ್ಲಿ ಭಂಗಾನಿ ಕದನದ ನಂತರ ಗುರು ಗೋವಿಂದ್ ಸಿಂಗ್ ಜಿ ತಮ್ಮ ತಂದೆ ಗುರು ತೇಜ್ ಬಹದ್ದೂರ್ ಜಿ ಗೌರವಾರ್ಪಣೆಗೆ ಇಲ್ಲಿ ಭೇಟಿ ನೀಡಿದರು. ಬಂದಾ ಸಿಂಗ್ ಬಹದ್ದೂರ್ ಸಹ, ಗುರು ಸಾಹಿಬ್ ಮತ್ತು ಮುಸ್ಲಿಂ ಫಕೀರ್ ಗೆ ತಮ್ಮ ನಮನವನ್ನು ಸಲ್ಲಿಸುವುದಕ್ಕಾಗಿ 1709 ರಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿದ್ದರು.1695 ರ ಕಾಲದ ಈ ದೇವಾಲಯವನ್ನು ಭೇಟಿ ನೀಡಲು ಅನೇಕ ಸಿಖ್ ಭಕ್ತರು ಪ್ರತಿ ವರ್ಷ ಇಲ್ಲಿ ಬರುತ್ತಾರೆ.


Click it and Unblock the Notifications