ಮೇಡಕ್‌ನಲ್ಲಿರುವ ಪ್ರಮುಖ ದೇವಾಲಯಗಳ ಸಾಲಿನಲ್ಲಿ ಎಡುಪಾಯಲ ದುರ್ಗಾ ಭವಾನಿ ಗುಡಿಯೂ ಕೂಡ ಒಂದಾಗಿದೆ. ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಗಡಿ ಪ್ರದೇಶದಲ್ಲಿ ಈ ಸುಂದರ ದೇವಾಲಯ ನೆಲೆಗೊಂಡಿದೆ. ದುರ್ಗಾದೇವಿಯ ಶಕ್ತಿಕೇಂದ್ರ ಎಂದು ಕರೆಯಲ್ಪಡುವ ಈ ದೇವಾಲಯದ ಕಲ್ಲಿನ ರಚನೆಗಳು ಅನನ್ಯ ಅನುಭವವನ್ನು ನೀಡುತ್ತದೆ. ಮಂಜೀರಾ ನದಿ ಈ ಸ್ಥಳದಲ್ಲಿ ಏಳು ಕವಲಲುಗಳಾಗಿ ಹರಿಯುತ್ತದೆ. ತೆಲುಗಿನಲ್ಲಿ ಎಡುಪಾಯಲು ಅಂದರೆ ಏಳು ಹೊಳೆಗಳು ಎಂದು ಅರ್ಥ. ಮಂಜೀರಾ ನದಿಯ ಹಿಂದೆ ದಂತಕಥೆಯೊಂದು ಚಾಲ್ತಿಯಲ್ಲಿದೆ. ಅರ್ಜುನನ ಮೊಮ್ಮಗ ಜನಮೇಜಯ ತಂದೆಯ ಶಾಪದಿಂದ ಮುಕ್ತವಾಗುವ ಸಲುವಾಗಿ ಸರ್ಪಯಾಗವನ್ನು ಕೈಗೊಳ್ಳುತ್ತಾನೆ. ಇಲ್ಲಿನ ದೇವಾಲಯದಲ್ಲಿ ಕೈಗೊಂಡಿದ್ದ ಆ ಸರ್ಪಯಾಗದ ಪವಿತ್ರ ಭಸ್ಮವನ್ನು ಮಂಜೀರಾ ನದಿಯ ತಳದಲ್ಲಿ ಹೂಳಿಡಲಾಗಿದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಇಲ್ಲಿ ಯಾವಾಗಲೂ ಜನಸಂದಣಿ ಇದ್ದು, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಿಂದಲೂ ಪ್ರತೀ ವರ್ಷ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಶಿವರಾತ್ರಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ.


Click it and Unblock the Notifications