ಮಂದಿರಗಳನ್ನು ಹೊರತುಪಡಿಸಿ ಮಥುರಾ ನಗರವು ವಿಸ್ತಾರವಾದ ಘಾಟ್ ಗಳಿಗೆ ಪ್ರಸಿದ್ಧವಾಗಿದೆ. ಈ ನಗರ ಯಮುನಾ ನದಿಯ ಉದ್ದಕ್ಕೂ ವಿಸ್ತರಿಸಿಕೊಂಡಿದೆ. ಉದ್ದನೆಯ ಕಲ್ಲಿನ ಮೆಟ್ಟಿಲುಗಳನ್ನು ಹೊಂದಿರುವ ಈ ಘಾಟ್ ಗಂಗಾ ನದಿಯನ್ನು ತಲುಪುತ್ತದೆ. ಹಿಂದೂಗಳ ನಂಬಿಕೆಯ ಪ್ರಕಾರ, ಗಂಗೆಯಲ್ಲಿ ಮಿಂದು ಏಳುವುದು ಮನುಷ್ಯನ ಎಲ್ಲಾ ಪಾಪಗಳನ್ನು ತೊಳೆದುಕೊಂಡು ನಿರ್ಮಲವಾದಂತೆ.
ಈ ಘಾಟ್ ಗಳು ಎಲ್ಲಾ ಧಾರ್ಮಿಕ ಆಚರಣೆಗಳು ಮತ್ತು ಇತರ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ. ಯಾವುದೇ ಘಾಟ್ ಗೆ ಭೇಟಿ ನೀಡಿದರೂ ಸಾಕಷ್ಟು ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಪವಿತ್ರ ನದಿಯಲ್ಲಿ ಮಿಂದೇಳುವ ದೃಶ್ಯ ಕಂಡುಬರುತ್ತದೆ. ಮುಂಜಾನೆ ಹಾಗು ಸಂಜೆಯ ಹೊತ್ತು ವಿಶೇಷವಾದ ಆರತಿಯನ್ನು ಮಾಡುತ್ತಾರೆ. ಈ ಘಟ್ಟಗಳಲ್ಲಿ ಕೆಲವು ಆಶ್ರಮ, ಮಂದಿರ, ಗುಡಿಗಳನ್ನು ಕಾಣುತ್ತೇವೆ. ಇಲ್ಲಿರುವ 25 ಘಾಟ್ ಗಳಲ್ಲಿ ವಿಶ್ರಾಮ್ ಘಾಟ್ ಅತ್ಯಂತ ಪ್ರಸಿದ್ಧವಾದದ್ದು. ಏಕೆಂದರೆ, ಇದೇ ಸ್ಥಳದಲ್ಲಿ ಶ್ರೀಕೃಷ್ಣನು ತನ್ನ ಸೋದರಮಾವನಾದ ಕಂಸನನ್ನು ಸದೆಬಡಿದು ಬಂದು ಕೆಲಹೊತ್ತು ವಿಶ್ರಮಿಸಿಕೊಂಡ ಎಂಬ ನಂಬಿಕೆ ಇದೆ.


Click it and Unblock the Notifications