Search
 • Follow NativePlanet
Share
ಮುಖಪುಟ » ಸ್ಥಳಗಳು» ಮಣಿಪುರ

ಮಣಿಪುರ ಪ್ರವಾಸೋದ್ಯಮ - ಸ್ಥಳೀಯ ಸಂಸ್ಕೃತಿಗಳ ಕೌತುಕಮಯ ಸಮ್ಮೀಲನ

ತಡೆಯಿಲ್ಲದ ಆಸಕ್ತಿಭರಿತ ಪಯಣಿಗರಿಗೆ ಮಣಿಪುರ್ ಒಂದು ಅಚ್ಚರಿಗಳನ್ನು ಹೊತ್ತು ನಿಂತ ನೈಸರ್ಗಿಕ ಖಜಾನೆಯೆ ಹೌದು. ಭಾರತದ ಈಶಾನ್ಯ ಭಾಗದಲ್ಲಿ ನೆಲೆಸಿರುವ ಈ ರಾಜ್ಯವು ಹಸಿರುಮಯ ಪ್ರಕೃತಿಯ ಮಧ್ಯೆ ಆದರ್ಶಪ್ರಾಯ ವಿಹಾರಿ ತಾಣವಾದ  ಲೊಕ್ತಕ್ ಕೆರೆ, ಹಿತಕರವಾದ ವಾತಾವರಣ, ಮೈಮನ ಪುಳಕಿತಗೊಳಿಸುವ ಶಿರೂಯಿ ಲಿಲಿ ಹೂಗಿಡಗಳು, ರೋಮಾಂಚನಗೊಳಿಸುವ ಸಾಂಗೈ ಜಿಂಕೆಗಳು ಹೀಗೆ ಅನೇಕ ವಿಸ್ಮಯಗಳನ್ನು ಪ್ರವಾಸಿಗರ ಮುಂದೆ ತೆರೆದಿಡುತ್ತಾ ಹೋಗುತ್ತದೆ.  ಮಣಿಪುರ್ ರಾಜ್ಯವು ತನ್ನ ಉತ್ತರ, ದಕ್ಷಿಣ, ಪೂರ್ವ ಹಾಗು ಪಶ್ಚಿಮಗಳಲ್ಲಿ ಕ್ರಮವಾಗಿ ನಾಗಾಲ್ಯಾಂಡ್, ಮಿಜೋರಾಮ್, ಬರ್ಮಾ ಹಾಗು ಅಸ್ಸಾಂಗಳಿಂದ ಸುತ್ತುವರೆದಿದೆ.

ಮಣಿಪುರಿನಲ್ಲಿರುವ ಪ್ರವಾಸಿ ಆಕರ್ಷಣೆಗಳು

ಮಣಿಪುರದ ರಾಜಧಾನಿ ಇಂಫಾಲ್ ತನ್ನಲ್ಲಿರುವ ವನ್ಯಜೀವಿ ಹಾಗು ಪ್ರಕೃತಿ ಸೊಬಗಿಗೆ ಹೆಸರುವಾಸಿಯಾದಂತಹ ಪ್ರಮುಖ ತಾಣ. ರೋಚಕದ ಸಂಗತಿಯೆಂದರೆ ಪೊಲೊ ಆಟವು ಹುಟ್ಟಿದ್ದು ಇಲ್ಲೆ! ಇಲ್ಲಿ ಪುರಾತನ ಇತಿಹಾಸವಿರುವ ಅನೇಕ ಸ್ಮಾರಕಗಳು ಮತ್ತು ದೇವಾಲಯಗಳನ್ನು ಕಾಣಬಹುದಾಗಿದೆ. 'ಇಂಫಾಲ್ ಯುದ್ಧ' ಹಾಗು 'ಕೋಹಿಮಾ ಯುದ್ಧ'ಗಳ ಕಾರಣದಿಂದಾಗಿ, ಇಂಫಾಲ್ ನ ಹೆಸರು ಎರಡನೇಯ ಜಾಗತಿಕ ಯುದ್ಧದಲ್ಲೂ ಉಲ್ಲೇಖಿತವಾಗಿರುವುದನ್ನು ಗಮನಿಸಬಹುದು. ಇಲ್ಲಿ ಭೇಟಿ ನೀಡಬಹುದಾದ ಕೆಲವು ಪ್ರಮುಖ ಆಕರ್ಷಣೆಗಳೆಂದರೆ, ಶ್ರೀ ಗೋವಿಂದಾಜಿ ದೇವಾಲಯ, ಕಾಂಗ್ಲಾ ಅರಮನೆ, ಯುದ್ಧಭೂಮಿಗಳು, ಮಹಿಳೆಯರಿಂದಲೆ ನಡೆಸಲ್ಪಡುವ ಇಮಾ ಕೈಥೇಲ್ ಮಾರುಕಟ್ಟೆ, ಇಂಫಾಲ್ ಕಣಿವೆ ಮತ್ತುಕೆಲವು ಆಕರ್ಷಕ ಉದ್ಯಾನಗಳು.ಚಾಂಡೇಲ್ ಪಟ್ಟಣವು ಪಕ್ಕದ ಮಯನ್ಮಾರ್ ದೇಶಕ್ಕೆ ಹೆಬ್ಬಾಗಿಲಿನಂತಿದ್ದರೂ ಮಣಿಪುರ ಪ್ರವಾಸೋದ್ಯಮದ ಒಂದು ಅವಿಭಾಜ್ಯ ಅಂಗವಾಗಿದೆ. ಜೀವ ವೈವಿಧ್ಯತೆ ಹಾಗು ಪ್ರಕೃತಿ ಸಂಪತ್ತಿಗೆ ಚಾಂಡೇಲ್ ಹಾಗು ತಮೆಂಗ್ಲಾಂಗ್ ಎರಡು ಅದ್ಭುತ ತಾಣಗಳಾಗಿವೆ. ಚಾಂಡೇಲ್ ನ ಮೊರೆಹ್ ನಗರವು ಮಣಿಪುರದ ವಾಣಿಜ್ಯ ತಾಣವೆಂದರೆ ತಪ್ಪಾಗಲಾರದು. ತಮೆಂಗ್ಲಾಂಗ್ ನಲ್ಲಿ ಆಚರಿಸಲಾಗುವ ಕಿತ್ತಳೆ ಹಣ್ಣಿನ ಉತ್ಸವವಂತೂ ಸುತ್ತಮುತ್ತಲಿನ ಪ್ರದೇಶಗಳ ಅನೇಕ ಜನರನ್ನು ಚುಂಬಕದಂತೆ ಸೆಳೆಯುತ್ತದೆ.ಮಣಿಪುರದ ಮತ್ತೊಂದು ಜಿಲ್ಲೆಯಾದ ಸೇನಾಪತಿಯು ತನ್ನೊಡಲಲ್ಲಿ ವಿಸ್ಮಯಭರಿತ ಆಕರ್ಷಣೆಗಳನ್ನು ಹೊತ್ತ ಅನೇಕ ಹಳ್ಳಿಗಳನ್ನು ಹುದುಗಿಸಿಟ್ಟುಕೊಂಡಿದೆ. ಐತಿಹಾಸಿಕವಾಗಿ ಮರಮ್ ಖುಲ್ಲೇನ್, ಮಾಖೇಲ್ ಮತ್ತು ಯಾಂಗ್ಖುಲ್ಲೇನ್ ಪ್ರಮುಖವಾಗಿದ್ದರೆ, ಮಾವೊ ಮಣಿಪುರ ರಾಜ್ಯದ ಹೆಬ್ಬಾಗಿಲಾಗಿಯೂ ಮತ್ತು ಪುರುಲ್ ಟೌಟೌ(ಮಣಿಪುರ ರಾಜ್ಯದ ಒಂದು ಜನಪ್ರಿಯ ಆಟ) ಕ್ರೀಡೆಯ ತವರಾಗಿಯೂ ಪ್ರಸಿದ್ಧವಾಗಿವೆ.

ಕೆರೆಗಳು, ಉದ್ಯಾನಗಳು ಮತ್ತು ಗಿರಿಶೃಂಗಗಳು

ಮಣಿಪುರದ ಬಿಷ್ಣುಪುರಿನಲ್ಲಿರುವ ಲೋಕ್ತಕ್ ಕೆರೆಯು ಇಡಿ ಪ್ರಪಂಚದಲ್ಲೆ ಕಾಣಬಹುದಾದ ಏಕೈಕ 'ಫ್ಲೋಟಿಂಗ್ ಲೇಕ್' ಅಥವಾ ತೇಲಾಡುವ ಕೆರೆಯಾಗಿದ್ದು ಪ್ರವಾಸಿ ವಲಯದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಮಣ್ಣು ಹಾಗು ಇತರೆ ಸಸ್ಯರಾಶಿಗಳನ್ನು ಹೊತ್ತ ದಿಬ್ಬಗಳು ತೇಲಾಡುತ್ತಿರುವ ಕೆರೆಯನ್ನು 'ಫ್ಲೋಟಿಂಗ್ ಲೇಕ್' ಎಂದು ಕರೆಯಲಾಗುತ್ತದೆ. ಈ ಕೆರೆಯಲ್ಲಿ ಕಣ್ಡುಬರುವ ಸೆಂದ್ರಾ ದ್ವೀಪವು ಪಿಕ್ನಿಕ್ ಗೆ ಹೇಳಿ ಮಾಡಿಸಿದ ಸ್ಥಳ. ಈ ಕೆರೆಯ ಅನತಿ ದೂರದಲ್ಲೆ ಕೈಬುಲ್ ಲಮ್ಜಾವ್ ರಾಷ್ಟ್ರೀಯ ಉದ್ಯಾನವನ್ನು ಕಾಣಬಹುದಾಗಿದೆ. ಈ ಉದ್ಯಾನವು ಅಳಿವಿನಂಚಿನಲ್ಲಿರುವ ಸಾಂಗೈ ಜಿಂಕೆಗಳ ನೆಲೆಯಾಗಿ ಹೆಸರುವಾಸಿಯಾಗಿದೆ.ತಮೆಂಗ್ಲಾಂಗ್ ನಲ್ಲಿ ಕಂಡುಬರುವ ಜೈಲಾದ್ ಕೆರೆಯು ಸಾಹಸ ಚಟುವಟಿಕೆಗಳನ್ನು ಮಾಡಬಯಸುವ ಪ್ರವಾಸಿಗರಿಗೆ ಪ್ರಿಯವಾಗಿದ್ದರೆ, ತೌಬಲ್ ಜಿಲ್ಲೆಯಲ್ಲಿರುವ ವೈಥೌ ಕೆರೆಯು ತನ್ನ ಸೌಂದರ್ಯದಿಂದಾಗಿ ಪ್ರಕೃತಿ ಪ್ರಿಯರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಮಣಿಪುರಿನ ತೌಬಲ್ ಜಿಲ್ಲೆಯು ಚುರುಕಿನ ಕೃಷಿ ಚಟುವಟಿಕೆಯ ತಾಣವಾಗಿದ್ದು, ಮನಮೋಹಕವಾದ ಗದ್ದೆಗಳ ನೋಟವನ್ನು ಪ್ರಸ್ತುತಪಡಿಸುತ್ತದೆ. ಇಲ್ಲಿ ಕಂಡುಬರುವ ಕೆಲವು ಕೆರೆಗಳೆಂದರೆ, ಇಕಾಪ್ ಕೆರೆ, ಲೌಸಿ ಕೆರೆ ಮಾತು ಪುಮ್ಲೆನ್ ಕೆರೆ. ಉಖ್ರುಲ್ ನ ಖಾಯಾಂಗ್ ಜಲಪಾತದ ಹತ್ತಿರವಿರುವ ಕಾಚೌಫುಂಗ್ ಕೆರೆಯು ನೈಸರ್ಗಿಕವಾಗಿ ನಿರ್ಮಿತವಾದಂತಹ ಸುಂದರ ಕೆರೆಯಾಗಿದೆ.ಚೂರ್ಚಂದ್ಪೂರ್ ನಲ್ಲಿರುವ ಗಲೋಯಿ(Ngaloi) ಜಲಪಾತ ಹಾಗು ಖುಗಾ ಆಣೆಕಟ್ಟು ಪ್ರವಾಸ ಪ್ರಿಯರ ನೆಚ್ಚಿನ ತಾಣಗಳು. ಇನ್ನೂ ಉಖ್ರುಲ್ನ ಶಿರೂಯಿ ಕಶುಂಗ್ ಗಿರಿ ಶೃಂಗವು ಶಿರೂಯಿ ಲಿಲಿ ಹೂಗಳಿಂದ ಆವೃತಗೊಂಡಿದ್ದು ಬೇಸಿಗೆಯ ಸಮಯದಲ್ಲಿ ವಿಹಂಗಮವಾದ ಪ್ರಕೃತಿ ನೋಟವನ್ನು ನೋಡುಗರಿಗೆ ಉಣಬಡಿಸುತ್ತದೆ. ಇಷ್ಟೆ ಅಲ್ಲ, ಚಾಂಡೇಲ್ ನಲ್ಲಿರುವ ತೆಗ್ಗು ದಿನ್ನೆಗಳ ಬುನಿಂಗ್ (N-piulong) ಹುಲ್ಲುಗಾವಲಿನ ಪ್ರದೇಶವು ಕಾಡು ಲಿಲಿ ಹಾಗು ಆರ್ಚಿಡ್ ಹೂಗಳಿಂದ ಆವೃತ್ತವಾಗಿದ್ದು, ಅತಿ ಉತ್ಕೃಷ್ಟ ಬಗೆಯ ಸುಂದರ ನೋಟವನ್ನು ಬೇಸಿಗೆಯ ಸಮಯದಲ್ಲಿ ನೋಡುಗರಿಗೆ ಕರುಣಿಸುತ್ತದೆ.ಈ ರೀತಿಯಾಗಿ ಹಲವು ವಿಸ್ಮಯಭರಿತ ವಿಶೇಷತೆಗಳನ್ನು ಬಚ್ಚಿಟ್ಟುಕೊಂಡಿರುವ ಮಣಿಪುರ್ ರಾಜ್ಯದ ಪ್ರವಾಸ, ಪ್ರವಾಸಿಗರ ಮನದಲ್ಲಿ ಜೀವನಪೂರ್ತಿಯಾಗಿ ನೆಲೆಸಲು ಸಫಲವಾಗುತ್ತದೆ.

ಮಣಿಪುರ ಸ್ಥಳಗಳು

 • ಉಖ್ರುಲ್ 19
 • ತಮೆಂಗ್ಲಾಂಗ್ 11
 • ಉಖ್ರುಲ್ 19
 • ಇಂಫಾಲ್ 44
 • ಚಾಂದೇಲ್ 7
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Apr,Wed
Return On
25 Apr,Thu