ಮೊರೆಹ ನಗರ ಮಣಿಪುರದ ವಾಣಿಜ್ಯ ಕೇಂದ್ರ ಮತ್ತು ಮ್ಯಾನ್ಮಾರ್ ಗೆ ಪ್ರವೇಶಕ್ಕೆ ಮಹಾದ್ವಾರ. ಈ ನಗರದಲ್ಲಿ ಮಣಿಪುರದ ವಿವಿಧ ಬುಡಕಟ್ಟು ಜನಾಂಗದವರು ಹಾಗೂ ಗಡಿಯಾಚೆಗಿನ ಬುಡಕಟ್ಟು ಜನಾಂಗದವರು ಜತೆಯಾಗಿ ವಾಸಿಸುವುದು ಸಂಸ್ಕೃತಿಯ ಸಮ್ಮಿಲನವನ್ನು ಎತ್ತಿ ತೋರಿಸುತ್ತದೆ. ದೇಶದ ಕೆಲವು ಪ್ರಗತಿಪರ ಆರ್ಥಿಕ ನೀತಿಯಿಂದಾಗಿ ಮೊರೆಹ ಮತ್ತಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಏಶ್ಯಾದ ಆಗ್ನೇಯ ರಾಷ್ಟ್ರಗಳು ಕೂಡ ಮೊರೆಹದ ಮೂಲಕವೇ ವಾಣಿಜ್ಯ ಸಂಪರ್ಕವನ್ನು ಕಲ್ಪಿಸುತ್ತದೆ. ಟ್ರಾನ್ಸ್- ಏಶ್ಯಾ ಸೂಪರ್ ಹೈವೇ ಯೋಜನೆ ಪೂರ್ಣಗೊಂಡರೆ ಮೊರೆಹ ನಗರದ ಭವಿಷ್ಯದಲ್ಲಿ ಮತ್ತಷ್ಟು ಪ್ರಗತಿ ಕಾಣಲಿದೆ. ಪ್ರವಾಸಿಗಳಲ್ಲಿ ವಿಸಾ ಇದ್ದರೆ ಮೊರೆಹದ ಸೋದರ ನಗರ ಮ್ಯಾನ್ಮಾರ್ ನಲ್ಲಿರುವ ತಮುಗೆ ಕೂಡ ಭೇಟಿ ನೀಡಬಹುದು. ಮೊರೆಹದಲ್ಲಿ ಈಗಾಗಲೇ ಹಲವಾರು ವಾಣಿಜ್ಯ ಮಳಿಗೆಗಳು ಸ್ಥಾಪನೆಗೊಂಡಿದ್ದು, ನೆರೆರಾಷ್ಟ್ರದೊಂದಿಗಿನ ವ್ಯಾಪಾರ ಕೂಡ ವೃದ್ಧಿಸಿದೆ.
ಜಿಲ್ಲಾ ಕೇಂದ್ರ ಚಾಂದೇಲ್ ನಿಂದ ಮೊರೆಹ 70 ಕಿ.ಮೀ. ದೂರದಲ್ಲಿದೆ. ರಾಜಧಾನಿ ಇಂಪಾಲ್ ನಿಂದ 110 ಕಿ.ಮೀ. ದೂರದಲ್ಲಿದೆ. ಮೊರೆಹಗೆ ಪ್ರಯಾಣಿಸಬೇಕಾದರೆ ಪ್ರವಾಸಿಗಳು ಮೊದಲು ಚಾಂದೇಲ್ ಗೆ ಹೋಗಬೇಕು.