ಶ್ರೀ ಗುರು ನಾನಕ್ ದೇವ್‍ಜೀ ಗುರುದ್ವಾರವು ಮನಿಕರನ್‍ನ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಗ್ಯಾನಿ ಸಿಂಗ್‍ರವರು ರಚಿಸಿದ ಗ್ರಂಥ "ತ್ವಾರಿಖ್ ಗುರು ಖಾಲ್ಸ"ದ ಪ್ರಕಾರ, ಗುರು ನಾನಕ್ ದೇವ್‍ರವರು ಇಲ್ಲಿಗೆ ತಮ್ಮ ಐದು ಜನ ಅನುಯಾಯಿಗಳ ಜೊತೆಗೆ ಭೇಟಿಕೊಟ್ಟಿದ್ದರಂತೆ.
ಇಲ್ಲಿ ಗುರು ನಾನಕರು ತಮ್ಮ ಅನುಯಾಯಿಯಾದ ಭಾಯಿ ಮರ್ದನನಿಗೆ "ಲಂಗರ್" ಅಂದರೆ ಅನ್ನ ದಾಸೋಹಕ್ಕಾಗಿ ಕಾಳು ಕಡ್ಡಿಗಳನ್ನು ಸಂಗ್ರಹಿಸಲು ತಿಳಸಿದರಂತೆ. ಆನಂತರ ಗುರು ನಾನಕ್ ದೇವ್‍ರವರು ಆತನಿಗೆ ತನ್ನ ಪಕ್ಕದಲ್ಲಿ ಬಿದ್ದಿದ್ದ ಕಲ್ಲನ್ನು ಎತ್ತಲು ಹೇಳಿದರಂತೆ. ಆತ ಹಾಗೆಯೇ ಆ ಕಲ್ಲನ್ನು ಎತ್ತಿದಾಗ ಅಲ್ಲಿ ಇದ್ದಕಿದ್ದಂತೆ ಒಂದು ಬಿಸಿನೀರಿನ ಚಿಲುಮೆ ಚಿಮ್ಮಿತಂತೆ. ಇಂದಿಗು ಆ ಬಿಸಿನೀರಿನ ಚಿಲುಮೆ ಹಾಗೆಯೇ ಹರಿಯುತ್ತಿದೆ. ಅದೇ ಬಿಸಿ ನೀರಿನಲ್ಲಿ "ಲಂಗರ್" ಅನ್ನು ತಯಾರಿಸಲಾಗುತ್ತದೆ. ಮನಿಕರನ್‍ಗೆ ಭೇಟಿಕೊಡುವ ಪ್ರವಾಸಿಗರು ಈ ಬಿಸಿನೀರಿನ ಬುಗ್ಗೆಯಲ್ಲಿ ಸ್ನಾನ ಮಾಡುತ್ತಾರೆ ಮತ್ತು ಇದೇ ನೀರನ್ನು ಕುಡಿಯುತ್ತಾರೆ. ಇಲ್ಲಿನ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಮುಕ್ತಿ ಸಿಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ.
ಮಹಾಭಾರತದ ಕರ್ತೃವಾದ ವೇದವ್ಯಾಸರವರು ತಮ್ಮ "ಭವಿಷ್ಯ ಪುರಾಣ" ದಲ್ಲಿ ನುಡಿದಂತೆ ಗುರು ನಾನಕರ ಭೇಟಿಯ ನಂತರ ಸಿಖ್ಖರ ಹನ್ನೊಂದನೆ ಗುರು ಗುರು ಗೋವಿಂದ್ ಸಿಂಗ್‍ರವರು ತಮ್ಮ ಪಂಜ್ ಪೈಯರಸ್ ಅಥವಾ "ಐದು ಜನ ಆಪ್ತರ ಜೊತೆಗೆ" ಮನಿಕರನ್‍ಗೆ ಭೇಟಿಕೊಟ್ಟರು.


Click it and Unblock the Notifications