Search
  • Follow NativePlanet
Share
ಮುಖಪುಟ » ಸ್ಥಳಗಳು » ಮನಿಕರನ್ » ಹವಾಮಾನ

ಮನಿಕರನ್ ಹವಾಮಾನ

ಮನಿಕರನ್‍ಗೆ ಬರಲು ಇಚ್ಛಿಸುವ ಪ್ರವಾಸಿಗರು ಇಲ್ಲಿಗೆ ಏಪ್ರಿಲ್ ನಿಂದ ಜೂನ್‍ವರೆಗಿನ ಅವಧಿಯಲ್ಲಿ ಭೇಟೀಕೊಡುವುದು ಉತ್ತಮ.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್) : ಬೇಸಿಗೆ ಕಾಲವು ಮನಿಕರನ್‍ನಲ್ಲಿ ಏಪ್ರಿಲ್‍ನಲ್ಲಿ ಶುರುವಾಗಿ ಜೂನ್‍ನಲ್ಲಿ ಅಂತ್ಯವಾಗುತ್ತದೆ. ಈ ಅವಧಿಯಲ್ಲಿ ಮನಿಕರನ್‍ನಲ್ಲಿ ಉಷ್ಣಾಂಶವು ಗರಿಷ್ಠ 16° ಸೆಲ್ಶಿಯಸ್ ಮತ್ತು ಕನಿಷ್ಠ 6° ಸೆಲ್ಶಿಯಸ್ ಇರುತ್ತದೆ.

ಮಳೆಗಾಲ

(ಜುಲೈ ನಿಂದ ಸೆಪ್ಟೆಂಬರ್) : ಮಳೆಗಾಲವು ಮನಿಕರನ್‍ನಲ್ಲಿ ಜುಲೈನಲ್ಲಿ ಆರಂಭವಾಗಿ ಸೆಪ್ಟೆಂಬರ್ ವರೆಗೆ ಇರುತ್ತದೆ. ಮನಿಕರನ್‍ನಲ್ಲಿ ವರ್ಷಪೂರ್ತಿ ಮಿತವಾಗಿ ಮಳೆ ಬೀಳುತ್ತಲೆ ಇರುತ್ತದೆ. ಮಳೆಗಾಲದಲ್ಲಿ ಇಲ್ಲಿ ಭಾರೀ ಮಳೆಯೆ ಸುರಿಯುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 8˚ ಸೆಲ್ಶಿಯಸ್ ಆಸು ಪಾಸಿನಲ್ಲಿರುತ್ತದೆ.

ಚಳಿಗಾಲ

(ನವೆಂಬರ್ ನಿಂದ ಮಾರ್ಚ್) : ನವೆಂಬರ್ ತಿಂಗಳಿನಲ್ಲಿ ಇಲ್ಲಿ ಚಳಿಗಾಲವು ಆರಂಭವಾಗುತ್ತದೆ. ಅದು ಮಾರ್ಚ್ ವರೆಗೆ ಮುಂದುವರಿಯುತ್ತದೆ. ಹಿಮಾಚಲ್ ಪ್ರದೇಶದ ಇನ್ನಿತರ ಸ್ಥಳಗಳಿಗೆ ಹೋಲಿಸಿದರೆ ಮನಿಕರನ್‍ನಲ್ಲಿ ಅತ್ಯಧಿಕ ಚಳಿ ಕಂಡು ಬರುತ್ತದೆ. ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು ಕನಿಷ್ಠ -8° ಸೆಲ್ಶಿಯಸ್ ಮತ್ತು ಗರಿಷ್ಠ  3° ಸೆಲ್ಶಿಯಸ್ ಇರುತ್ತದೆ.