ಕುಲಂತ್ ಪೀಠವು ಹಿಮಾಚಲ್ ಪ್ರದೇಶದಲ್ಲಿರುವ ವಿಷ್ಣು ಕುಂಡದಲ್ಲಿದ್ದು, ದೇಶದ ಅತ್ಯಂತ ಪ್ರತಿಷ್ಠಿತ ಪೀಠಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ಜನಪದ ಕತೆಯ ಪ್ರಕಾರ, ಲಯಕಾರಕನಾದ ಪರಶಿವನು ಇಲ್ಲಿ ವಾಸಿಸುತ್ತಿದ್ದಾನಂತೆ. ಹಾಗಾಗಿ ಇದು ಹಲವಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.
ಈ ಪೀಠವು ಒಂದು ಪವಿತ್ರ ಕಲ್ಯಾಣಿಯನ್ನು ಹೊಂದಿದೆ. ನಂಬಿಕೆಗಳ ಪ್ರಕಾರ, ಇದು ಭಕ್ತಾಧಿಗಳಿಗೆ ಮುಕ್ತಿಯನ್ನು ದಯಪಾಲಿಸುತ್ತದೆಯಂತೆ.
ವೈಷ್ಣವ ಸಮುದಾಯದ ನಾರದ ಮುನಿಗಳು ಉಲ್ಲೇಖಿಸಿದಂತೆ, ಶಿವನ ಕಣ್ಣಿನ ದೃಷ್ಟಿಯ ಶಕ್ತಿಯಿಂದ ಇಲ್ಲಿಗೆ ಭೇಟಿಕೊಡುವ ಭಕ್ತಾಧಿಗಳು ಎಲ್ಲ ರೀತಿಯ ಕೋಪದಿಂದ ಮತ್ತು ಪೀಡೆಗಳಿಂದ ನಿವಾರಣೆಯನ್ನು ಹೊಂದುತ್ತಾರಂತೆ. ಅಲ್ಲದೆ ಇಲ್ಲಿ ಉದ್ಭವಿಸುವ ಬಿಸಿನೀರಿನಿಂದ ತಯಾರಿಸಲಾದ ಆಹಾರವನ್ನು ಸೇವಿಸಿದವರು, ತಮ್ಮ ಜೀವನವನ್ನು ಅಂತ್ಯಗೊಳಿಸಿದ ನಂತರ ವಿಷ್ಣು ಲೋಕದಲ್ಲಿ ಸ್ಥಾನ ಪಡೆಯುತ್ತಾರಂತೆ.


Click it and Unblock the Notifications