ಮನಾಲಿಗೆ ಬಂದಾಗ ಮಜಾ ಅನುಭವಿಸಲು ಇತ್ತೀಚೆಗೆ ಪರಿಚಯವಾದ ಕ್ರೀಡೆ ಜೋರ್ಬಿಂಗ್. ಬೃಹತ್ ಪಾರದರ್ಶಕ ಚಂಡಿನೊಳಗೆ ಸಾಹಸಿಗಳು ಹೊಕ್ಕುತ್ತಾರೆ. ನಂತರ ಇದು ತಗ್ಗು ಪ್ರದೇಶದತ್ತ ಉರುಳುತ್ತಾ ಸಾಗುತ್ತದೆ. ಏಕಕಾಲಕ್ಕೆ ಹೆಚ್ಚೆಂದರೆ ಇಬ್ಬರಿಗೆ ಇದರೊಳಗೆ ತೂರಿಕೊಳ್ಳಲು ಅವಕಾಶ ಇರುತ್ತದೆ. ಇಬ್ಬರಿಂದ ಸೇರಿ ಒಟ್ಟು ತೂಕ 120 ಕೇ.ಜಿ. ದಾಟಬಾರದು. ಬೌಲ್ ಉರುಳುತ್ತಾ ಸಾಗುವಾಗ ತೊಂದರೆ ಆಗದಿರಲಿ ಅಂತ ಗಟ್ಟಿಯಾಗಿ ಒಂದೆಡೆ ಹಿಡಿದುಕೊಳ್ಳುವಂತೆ ಕ್ರೀಡಾಪಟುಗಳಿಗೆ ಸೂಚಿಸಲಾಗುತ್ತದೆ. ತಗ್ಗು ಸಹ 100 ಮೀಟರ್ ಆಳದವರೆಗೆ ಇರುತ್ತದೆ. ಇನ್ನಷ್ಟು ಕುತೂಹಲ ಮೂಡಲಿ ಅನ್ನುವ ಕಾರಣಕ್ಕೆ ಇತ್ತೀಚೆಗೆ ವ್ಯಾಪ್ತಿಯನ್ನು 150 ಮೀಟರ್‌ಗೂ ವಿಸ್ತರಿಸಲಾಗಿದೆ.


Click it and Unblock the Notifications