ಮನಾಲಿಯ ಕೇಂದ್ರ ಭಾಗದಲ್ಲಿದೆ ವನವಿಹಾರ. ಇದೊಂದು ಅತ್ಯಾಕರ್ಷಕ ಉದ್ಯಾನ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮನಸ್ಸಿನ ನೆಮ್ಮದಿ ಜತೆ ಬೋನಸ್ ರೂಪದಲ್ಲಿ ಬೋಟಿಂಗ್ ಸೌಲಭ್ಯ ಕೂಡ ಸಿಗುತ್ತದೆ. ಇಲ್ಲೊಂದು ಚಿಕ್ಕ ಕೆರೆ ಇದೆ. ಸುತ್ತಲೂ ಸುಂದರ ಮರಗಳಿಂದ ಆವೃತ್ತವಾಗಿರುವ ತಾಣ ಅತ್ಯಂತ ಸುಂದರವಾಗಿದೆ. ಸಂಜೆಯ ಸಮಯ ಕಳೆಯಲು ಇದು ಅತ್ಯಂತ ಸೂಕ್ತ ತಾಣ.