ಸ್ಕೀಯಿಂಗ್ ಮನಾಲಿಯಲ್ಲಿ ಅತ್ಯಂತ ವಿಶೇಷತೆಯೊಂದಿಗೆ ನಡೆಯುವ ಕ್ರೀಡೆ. ಮನಾಲಿಯಿಂದ 14 ಕಿ.ಮೀ. ದೂರದಲ್ಲಿರುವ ಸೊಲಾಂಗ್ ಕಣಿವೆಯಲ್ಲಿ ಸ್ಕೀಯಿಗ್ ಮಾಡಬಹುದಾಗಿದೆ. ಈ ಕಣಿವೆಯಲ್ಲಿ ಎರಡು ತಗ್ಗುಗಳಿವೆ. ಇವು ಸ್ಕೀಯಿಂಗ್ಗೆ ಹೇಳಿ ಮಾಡಿಸಿದಂತಿವೆ. ಪ್ರವಾಸಿಗರಿಗರ ಅನುಕೂಲಕ್ಕಾಗಿ ಇಲ್ಲಿ ಎರಡು ಪ್ರತ್ಯೇಕ ಲಿಫ್ಟ್ಗಳನ್ನು ನಿರ್ಮಿಸಲಾಗಿದೆ.
ಇದಲ್ಲದೇ ಪ್ರವಾಸಿಗರು ಸ್ಕೀಯಿಂಗ್ನ ಮಜಾವನ್ನು ಮರ್ಚಿ, ಗುಲಾಬಾ, ಧುಂದಿ, ರೊಹತಂಗ್ ಪಾಸ್ ಹಾಗೂ ಪತ್ಲಾಸುಗಳಲ್ಲಿಯೂ ಅನುಭವಿಸಬಹುದು. ಡಿಸೆಂಬರ್, ಜನವರಿ ಹಾಗೂ ಫೆಬ್ರವರಿ ತಿಂಗಳು ಈ ಕ್ರೀಡೆಗೆ ಸಕಾಲ. ಈ ಸಮಯದಲ್ಲಿ ಹಿಮ ಅಪಾರ ಪ್ರಮಾಣದಲ್ಲಿ ಹಾಸಿಕೊಂಡಿರುತ್ತದೆ. ಬೇಸಿಗೆಯಲ್ಲಿ ಸ್ಕೀಯಿಂಗ್ಗೆ ಮನಾಲಿಯಲ್ಲೇ ರೊಹತಂಗ್ ಪಾಸ್ ಹಾಗೂ ಪತ್ಲಾಸುಗಳು ಸೂಕ್ತ ತಾಣ.
ಸ್ಕೀಯಿಂಗ್ಗೆ ಬೇಕಾದ ಸಾಧನವನ್ನು ಸ್ಥಳೀಯ ಸ್ಕೀ ನಿರ್ವಹಣೆದಾರರಿಂದ ಪಡೆಯಬಹುದು. ಇವರು ಸೂಚನೆಯ ಜತೆ ಇದನ್ನು ಪೂರೈಸುತ್ತಾರೆ. ಈ ಸಾಧನವನ್ನು ಮೂರರಿಂದ ಐದು ದಿನದ ಮಟ್ಟಿಗೆ ಪ್ರವಾಸಿಗರು ಬಾಡಿಗೆಗೆ ಪಡೆಯಬಹುದು.